ಗೋಲ್ಡನ್ ರಿಟ್ರೈವರ್ ಜಾತಿಯ ಶ್ವಾನವೊಂದು ಏಕಕಾಲದಲ್ಲಿ ಅತಿ ಹೆಚ್ಚು ಟೆನಿಸ್ ಚೆಂಡುಗಳನ್ನು ತನ್ನ ಬಾಯಿಯಲ್ಲಿ ಹಿಡಿದಿಟ್ಟು ಗಿನ್ನಿಸ್ ದಾಖಲೆ ನಿರ್ಮಿಸಿದೆ.
ಒಂಟಾರಿಯೊ ಕೌಂಟಿಯ ಕೆನಂಡೈಗುವಾದ 6 ವರ್ಷದ ಗೋಲ್ಡನ್ ರಿಟ್ರೈವರ್ ಫಿನ್ಲೆ ಮೊಲ್ಲೊಯ್ ಎಂಬ ಶ್ವಾನವು, ಟೆನಿಸ್ ಚೆಂಡುಗಳು ತನ್ನ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಿತ್ತು. ಈಗ ತನ್ನ ಬಾಯಿಯಲ್ಲಿ ಒಂದೇ ಸಲ ಆರು ಟೆನಿಸ್ ಚೆಂಡುಗಳನ್ನು ಹಿಡಿದಿಟ್ಟುಕೊಂಡು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ.
2020 ರಲ್ಲಿ ನಾಯಿ ಈ ದಾಖಲೆ ನಿರ್ಮಿಸಿದ್ದರೂ ಸಹ, ಅಧಿಕೃತವಾಗಿ 2022 ರ ಆವೃತ್ತಿಯಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆಯಲಾಗಿದೆ.
ಸಮುದ್ರದಲ್ಲಿ ವಿಚಿತ್ರ ಮಾದರಿಯ ಜಲಚರ ಪತ್ತೆ….!
2017 ರಲ್ಲಿ ಶ್ವಾನದ ಮಾಲೀಕ ಎರಿನ್ ಮೊಲ್ಲೊಯ್, ಫಿನ್ಲಿಯು ತನ್ನ ಬಾಯಿಯಲ್ಲಿ ಟೆನ್ನಿಸ್ ಚೆಂಡುಗಳನ್ನು ಹಿಡಿದುಕೊಳ್ಳುವ ವಿಶಿಷ್ಟವಾದ ಪ್ರತಿಭೆಯನ್ನು ಹೊಂದಿರುವುದನ್ನು ಗಮನಿಸಿದ್ದರು.
https://www.instagram.com/p/CT140aMLaGy/?utm_source=ig_embed&ig_rid=aadd45eb-5c8b-401a-b2b4-b41cd37c27de