ಅವನು ಚಾಪೆಯೊಳಗೆ ತೂರಿದರೆ, ಇನ್ನೊಬ್ಬ ರಂಗೋಲೆ ಕೆಳಗೇ ತೂರುತ್ತಾನೆ ಎಂಬ ಗಾದೆಯೊಂದಿದೆ. ಈ ಕಳ್ಳರು ಚಾಪೆಯೊಳಗೆ ತೂರಿದರೆ, ಚಾಣಾಕ್ಷ ಪೊಲೀಸರು ರಂಗೋಲಿ ಕೆಳಗೇ ತೂರಿ ಕಳ್ಳರನ್ನು ಹಿಡಿಯುವ ಕೆಲಸ ಮಾಡುತ್ತಾರೆ.
ಇಬ್ಬರು ತಮ್ಮ ಚಾಲಾಕಿತನ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿ ಒಳಉಡುಪುಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಹೋಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಅಬುಧಾಬಿಯಿಂದ ಎತಿಹಾದ್ ಏರ್ ವೇಸ್ ನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಇವರಿಬ್ಬರು ಕಳ್ಳರು 97.4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ತಮ್ಮ ಒಳಉಡುಪಿನಲ್ಲಿ ತಂದು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ
ಚಿನ್ನದ ಕಳ್ಳ ಸಾಗಣೆ ಮಾಡುವ ದೊಡ್ಡ ಜಾಲವು ಸಕ್ರಿಯವಾಗಿದೆ ಎಂಬ ಮಾಹಿತಿ ಪಡೆದ ಕಸ್ಟಮ್ಸ್ ಅಧಿಕಾರಿಗಳು ಅನುಮಾನಾಸ್ಪದವಾಗಿ ವರ್ತಿಸತೊಡಗಿದ್ದ ಅಬುಧಾಬಿಯಿಂದ ಬಂದ 24 ವರ್ಷದ ಯುವಕನೊಬ್ಬ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ತನ್ನ ಬಳಿ ಏನೂ ಇಲ್ಲ ಎಂಬಂತೆ ನಟಿಸಿದ್ದಾನೆ.
ಕಡೆಗೆ ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ ಆತನ ಒಳಉಡುಪಿನಲ್ಲಿ 47.3 ಲಕ್ಷ ರೂಪಾಯಿ ಮೌಲ್ಯದ 918 ಗ್ರಾಂ ಚಿನ್ನವಿರುವುದು ಪತ್ತೆಯಾಗಿದ್ದು, ಆ ಯುವಕನನ್ನು ದಸ್ತಗಿರಿ ಮಾಡಿ ತನಿಖೆ ನಡೆಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 966 ಗ್ರಾಂ ಚಿನ್ನವಿಟ್ಟುಕೊಂಡು ಬಂದಿದ್ದ ಯುವಕನನ್ನು ಬಂಧಿಸಲಾಗಿದೆ.
ಅಂದ ಹಾಗೆ, ಇವರಿಬ್ಬರೂ ಕೇರಳದ ಕೋಝಿಕೋಡ್ ನ ನಿವಾಸಿಗಳಾಗಿದ್ದಾರೆ.