
ಮಡಿಕೇರಿ: ಮದುವೆ ಮನೆಯಲ್ಲಿ ಮದುಮಗಳಿಗೆಂದು ತಂದಿಟ್ಟಿದ್ದ ಚಿನ್ನಾಭರಣಗಳನ್ನೇ ದೋಚಿ ಕಳ್ಳ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರೈತಭವನದಲ್ಲಿ ನಡೆದಿದೆ.
ಮದುವೆಗೆ ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನೊಬ್ಬ ಮದುಮಗಳ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದಾನೆ. 45,000 ರೂ ಮೌಲ್ಯದ ಚಿನ್ನ, 50 ಸಾವಿರ ರೂ. ಮೌಲ್ಯದ ಚಿನ್ನದ ಕಡಗ, 23 ಸಾವಿರ ರೂ ಚಿನ್ನದ ಓಲೆ, ಹಾಗೂ 5 ಸಾವಿರ ರೂ. ಹಣ ಕದ್ದು ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮಧುವಿನ ಕುಟುಂಬದವರು ದೂರು ದಾಖಲಿಸಿದ್ದಾರೆ. ಮದುವೆ ಮಂಟಪಕ್ಕೆ ತೆರಳಿ ಸಿಸಿಕ್ಯಾಮರಾ ಪರಿಶೀಲಿಸಿರುವ ಪೊಲೀಸರು ಕಳ್ಳನಿಗಾಗಿ ಶೋಧ ನಡೆಸಿದ್ದಾರೆ.