ಭಾರತದಲ್ಲಿ ಚಿನ್ನ ಅಂದ್ರೆ ಶುಭ ಸಂಕೇತ. ಮದುವೆ, ಹಬ್ಬ ಹರಿದಿನಗಳಲ್ಲಿ ಚಿನ್ನ ಕೊಳ್ಳೋದು ಕಾಮನ್. ಆದ್ರೆ, ಮನೆಯಲ್ಲಿ ಚಿನ್ನ ಇಡುವಾಗ ಕೆಲವು ರೂಲ್ಸ್ ಫಾಲೋ ಮಾಡಬೇಕು. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಪ್ರಕಾರ, ಮನೆಯಲ್ಲಿ ಚಿನ್ನ ಇಡೋಕೆ ಲಿಮಿಟ್ ಇದೆ.
- ಮದುವೆಯಾಗದ ಹೆಣ್ಣು ಮಕ್ಕಳು 250 ಗ್ರಾಂ ಚಿನ್ನ ಇಡಬಹುದು.
- ಮದುವೆಯಾಗದ ಗಂಡು ಮಕ್ಕಳು 100 ಗ್ರಾಂ ಚಿನ್ನ ಇಡಬಹುದು.
- ಮದುವೆಯಾದ ಹೆಣ್ಣು ಮಕ್ಕಳು 500 ಗ್ರಾಂ ಚಿನ್ನ ಇಡಬಹುದು.
- ಮದುವೆಯಾದ ಗಂಡು ಮಕ್ಕಳು 100 ಗ್ರಾಂ ಚಿನ್ನ ಇಡಬಹುದು.
ನೀವು ಚಿನ್ನ ಮಾರಿದಾಗ ಬಂದ ಲಾಭಕ್ಕೆ ಟ್ಯಾಕ್ಸ್ ಕಟ್ಟಬೇಕು. 3 ವರ್ಷದ ಒಳಗೆ ಮಾರಿದರೆ ಅಲ್ಪಾವಧಿ ಬಂಡವಾಳ ಲಾಭ ತೆರಿಗೆ, 3 ವರ್ಷದ ನಂತರ ಮಾರಿದರೆ ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಕಟ್ಟಬೇಕು. ಆದ್ರೆ, ತಾತ ಮುತ್ತಾತನಿಂದ ಬಂದ ಚಿನ್ನ, ಕೃಷಿಯಿಂದ ಬಂದ ಆದಾಯ, ಮತ್ತು ರೂಲ್ಸ್ ಪ್ರಕಾರ ಇಟ್ಟಿರುವ ಚಿನ್ನಕ್ಕೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ. ಹಬ್ಬ ಹರಿದಿನಗಳಲ್ಲಿ ಚಿನ್ನ ಕೊಳ್ಳುವಾಗ ಈ ರೂಲ್ಸ್ ನೆನಪಿನಲ್ಲಿಡಿ.