
ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ದುಬೈ ನಿಂದ ಒಳಉಡುಪಿನಲ್ಲಿ ಚಿನ್ನದ ಪೇಸ್ಟ್ ಬಚ್ಚಿಟ್ಟುಕೊಂಡು ವಿಮಾನದಲ್ಲಿ ಬಂದಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆಯಿಂದ 17.53 ಲಕ್ಷ ರೂ. ಮೌಲ್ಯದ 347 ಗ್ರಾಂ ಚಿನ್ನದ ಪೇಸ್ಟ್ ಜಪ್ತಿ ಮಾಡಲಾಗಿದೆ.
ಅ. 8 ರಂದು ದುಬೈ ನಿಂದ ಮಹಿಳೆ ಆಗಮಿಸಿದ್ದು, ಆಕೆಯ ವರ್ತನೆಯಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ಕ್ಯಾನಿಂಗ್ ಮಾಡಿದಾಗ ಒಳಉಡುಪಿನಲ್ಲಿ ಲೋಹ ಇರುವುದು ಗೊತ್ತಾಗಿ ಪರಿಶೀಲಿಸಿದಾಗ ಚಿನ್ನದ ಪೇಸ್ಟ್ ಪತ್ತೆಯಾಗಿದೆ.