ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ ಕಂಡಿದೆ. ಬೆಳ್ಳಿ ದರ ಕೆಜಿಗೆ 1,400 ರೂ. ಏರಿಕೆಯಾಗಿದ್ದು, 93,300 ರೂಪಾಯಿಗೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ದರ 680 ರೂಪಾಯಿ ಹೆಚ್ಚಳವಾಗಿದ್ದು, 73,500 ರೂಪಾಯಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ದರ ಒಂದು ಔನ್ಸ್ ಗೆ,(28.34 ಗ್ರಾಂ) 2360 ಡಾಲರ್(ಸುಮಾರು 1.97 ಲಕ್ಷ ರೂ.)ಗೆ ಮಾರಾಟವಾಗಿದೆ. ಬೆಳ್ಳಿ ದರ ಒಂದು ಔನ್ಸ್ ಗೆ 30.30 ಡಾಲರ್ ನಂತೆ(ಸುಮಾರು 2530 ರೂ.)ಗೆ ಮಾರಾಟವಾಗಿದೆ.