ನವದೆಹಲಿ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ದರ ದಾಖಲೆಯ ಮಟ್ಟಕ್ಕೆ ತಲುಪಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಗೆ 800 ರೂ. ಏರಿಕೆ ಕಂಡ ಚಿನ್ನದ ದರ 65,000 ರೂ.ಗೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ದರ ಆಗಿದೆ.
ಮುಂಬೈ ಮತ್ತು ಕೊಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 64,850 ರೂ., ಚೆನ್ನೈನಲ್ಲಿ 65,620 ರೂ.ಗೆ ಏರಿಕೆಯಾಗಿದೆ.
ಬೆಳ್ಳಿ ದರ ಕೂಡ ಏರಿಕೆ ಕಂಡಿದೆ. ಬೆಳ್ಳಿ ದರ ಕೆಜಿಗೆ 900 ರೂಪಾಯಿ ಏರಿಕೆಯಾಗಿದ್ದು, 74,900 ರೂಪಾಯಿಗೆ ತಲುಪಿದೆ.
ಅಮೆರಿಕದಲ್ಲಿ ವಾಣಿಜ್ಯ ಮತ್ತು ನಿರ್ಮಾಣ ವಲಯದಲ್ಲಿ ಹೂಡಿಕೆ ಕಡಿತ, ಕೇಂದ್ರೀಯ ಬ್ಯಾಂಕ್ ಬಡ್ಡಿ ದರ ಕಡಿತ ಮಾಡುವ ಸುಳಿವು, ಹಣದುಬ್ಬರದ ಆತಂಕ ಕಡಿಮೆಯಾಗಿರುವುದು, ಜಾಗತಿಕ, ದೇಶೀಯವಾಗಿ ಬೇಡಿಕೆ ಹೆಚ್ಚಿದ ಪರಿಣಾಮ ಚಿನ್ನದ ದರ ಏರಿಕೆಯಾಗಿದೆ ಎನ್ನಲಾಗಿದೆ.