
ನವದೆಹಲಿ: ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳ್ಳಿ ದರ ಒಂದೇ ದಿನ ಕೆಜಿಗೆ ಎರಡು ಸಾವಿರ ರೂಪಾಯಿ ಏರಿಕೆಯಾಗಿದೆ.
ಗ್ರಾಹಕರಿಂದ ಖರೀದಿ ಹೆಚ್ಚಳವಾದ ಕಾರಣ ದೆಹಲಿಯ ಚಿನಿವಾರಪೇಟೆಯಲ್ಲಿ ಗುರುವಾರ ಬೆಳ್ಳಿ ದರ ಏರಿಕೆಯಾಗಿದ್ದು, ಚಿನ್ನದ ದರ ಕಡಿಮೆಯಾಗಿದೆ. ಬೆಳ್ಳಿ ದರ ಕೆಜಿಗೆ ಎರಡು ಸಾವಿರ ರೂಪಾಯಿ ಏರಿಕೆಯಾಗಿ 87,000 ರೂ.ಗೆ ಮಾರಾಟವಾಗಿದೆ. ಕಳೆದ 3 ವಹಿವಾಟಿನ ದಿನದಲ್ಲಿ ಬೆಳ್ಳಿ ದರ ಕೆಜಿಗೆ 3200 ರೂ.ನಷ್ಟು ಏರಿಕೆ ಕಂಡಿದೆ.
ಇವತ್ತು ಚಿನ್ನದ ದರ 10 ಗ್ರಾಂ ಗೆ 250 ರೂ. ಕಡಿಮೆಯಾಗಿದ್ದು, 74,350 ರೂಪಾಯಿಗೆ ಮಾರಾಟವಾಗಿದೆ.