ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಸತತ ಮೂರನೇ ದಿನವೂ ಚಿನ್ನದ ದರ ಏರಿಕೆಯಾಗಿದೆ.
ಶುಕ್ರವಾರ ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 700 ರೂಪಾಯಿ ಹೆಚ್ಚಳವಾಗಿ 82,000 ರೂ.ಗೆ ಮಾರಾಟವಾಗಿದೆ. ಗುರುವಾರ 81,300 ರೂ. ದರ ಇತ್ತು. ಶೇಕಡ 99.5 ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ ಗುರುವಾರ 80,300 ರೂ. ಇತ್ತು. ಶುಕ್ರವಾರ 81,600 ರೂ.ಗೆ ಮಾರಾಟವಾಗಿದೆ.
ಬೆಳ್ಳಿ ದರ ಶುಕ್ರವಾರ ಕೆಜಿಗೆ 500ರೂ. ಕಡಿಮೆಯಾಗಿ 93,500 ರೂ.ಗೆ ಮಾರಾಟವಾಗಿದೆ. ಗುರುವಾರ ಬೆಳ್ಳಿ ದರ ಕೆಜಿಗೆ 94 ಸಾವಿರ ರೂಪಾಯಿ ಇತ್ತು.