ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ರಾಜಧಾನಿ ದೆಹಲಿ ಚಿನಿವಾರ ಪೇಟೆಯಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ 500 ರೂಪಾಯಿ ಹೆಚ್ಚಳವಾಗಿದ್ದು, 60,900 ರೂ.ಗೆ ತಲುಪಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ದರ 10 ಗ್ರಾಂಗೆ 540 ರೂ. ಹೆಚ್ಚಳವಾಗಿದ್ದು 66,420 ರೂಪಾಯಿಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 200 ರೂಪಾಯಿ ಹೆಚ್ಚಳವಾಗಿದ್ದು, 75,700 ರೂಪಾಯಿಗೆ ತಲುಪಿದೆ.
ಚಿನ್ನದ ಜೊತೆಗೆ ಪ್ಲಾಟಿನಮ್ ನಂತಹ ಅಮೂಲ್ಯ ಲೋಹಗಳ ದರ ಕೂಡ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 6075 ರೂ., 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 6627 ರೂಪಾಯಿಗೆ ತಲುಪಿದೆ.
ಜಾಗತಿಕ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಾಣುತ್ತಿದೆ. ಚಿನ್ನದ ಮೇಲಿನ ಹೂಡಿಕೆ, ಬೇಡಿಕೆ ಹೆಚ್ಚಾಗಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.