
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಧಾರಣೆ ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಮತ್ತು ಚಿನ್ನದ ದರ ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ.
. ಶೇಕಡ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 600 ರೂ. ಹೆಚ್ಚಳವಾಗಿದ್ದು, 89,450 ರೂಪಾಯಿಗೆ ಮಾರಾಟವಾಗಿದೆ. ಶೇಕಡ 99.5 ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ಕೂಡ 600 ರೂ. ಹೆಚ್ಚಳವಾಗಿದ್ದು, 89,050 ರೂ.ಗೆ ಮಾರಾಟವಾಗಿದೆ.
ಫೆಬ್ರವರಿ 20ರಂದು ಶೇಕಡ 99.9 ರಷ್ಟು ಪರಿಶುದ್ಧತೆಯ ಚಿನ್ನದ ದರ 89,450 ರೂ., ಶೇಕಡ 99.5 ರಷ್ಟು ಪರಿಶುದ್ಧತೆಯ ಚಿನ್ನದ ದರ 89,050 ರೂಪಾಯಿಗೆ ತಲುಪಿತ್ತು.
ಗುರುವಾರದ ವಹಿವಾಟಿನಲ್ಲಿ ಬೆಳ್ಳಿ ದರ ಕೆಜಿಗೆ ಒಂದು ಸಾವಿರ ರೂಪಾಯಿ ಹೆಚ್ಚಳವಾಗಿದ್ದು, 1.01 ಲಕ್ಷ ರೂಪಾಯಿಗೆ ತಲುಪಿದೆ. ಇದು 5 ತಿಂಗಳ ಗರಿಷ್ಠ ಮಟ್ಟವಾಗಿದೆ.