
ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಮುಂದುವರೆದಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಚಿನ್ನದ ದರ ತಲುಪಿದೆ.
ಶೇಕಡ 99.9 ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 1300 ರೂಪಾಯಿ ಹೆಚ್ಚಳವಾಗಿದ್ದು, 89,400 ರೂಪಾಯಿಗೆ ಮಾರಾಟವಾಗಿದೆ. ಶೇಕಡ 99.5 ಪರಿಶುದ್ಧತೆಯ ಆಭರಣ ಚಿನ್ನದ ದರ ಕೂಡ 1,300 ರೂ. ಹೆಚ್ಚಳವಾಗಿದ್ದು, 89,000 ರೂ.ಗೆ ಮಾರಾಟವಾಗಿದೆ.
ಬೆಳ್ಳಿ ದರ ಕೆಜಿಗೆ 2 ಸಾವಿರ ರೂಪಾಯಿ ಏರಿಕೆಯಾಗಿದ್ದು, 4 ತಿಂಗಳ ಗರಿಷ್ಠ ಮಟ್ಟವಾದ ಒಂದು ಲಕ್ಷ ರೂಪಾಯಿಗೆ ತಲುಪಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಮತ್ತು ಜಾಗತಿಕ ಮಾರುಕಟ್ಟೆ ಬೆಳವಣಿಗೆ ಆಧರಿಸಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎನ್ನಲಾಗಿದೆ.