ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳ ಆಗಿದೆ. ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 500 ರೂಪಾಯಿ ಹೆಚ್ಚಳವಾಗಿದ್ದು, 81,300 ರೂಪಾಯಿಗೆ ಮಾರಾಟವಾಗಿದೆ.
ಶೇ. 99.5 ರಷ್ಟು ಶುದ್ಧತೆಯ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 500 ರೂಪಾಯಿ ಹೆಚ್ಚಳವಾಗಿದ್ದು, 80,900 ರೂಪಾಯಿಗೆ ಮಾರಾಟವಾಗಿದೆ.
ಬೆಳ್ಳಿ ದರ ಕೆಜಿಗೆ 2300 ರೂ. ಹೆಚ್ಚಳವಾಗಿದ್ದು, 94,000 ರೂ.ಗೆ ಮಾರಾಟವಾಗಿದೆ. ಚಿನ್ನಾಭರಣ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನದ ಖರೀದಿ ಪ್ರಮಾಣ ಹೆಚ್ಚಾಗಿದೆ. ರೂಪಾಯಿ ಮೌಲ್ಯ ಕುಸಿತವಾಗಿದ್ದು, ಇದರಿಂದಾಗಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ ಎನ್ನಲಾಗಿದೆ.