ನವದೆಹಲಿ: ಚಿನ್ನಾಭರಣ ವರ್ತಕರು, ಖರೀದಿದಾರರು, ಗ್ರಾಹಕರಿಂದ ಬೇಡಿಕೆ ಹೆಚ್ಚಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ 500 ರೂಪಾಯಿ ಏರಿಕೆ ಕಂಡಿದೆ.
ಗುರುವಾರ ದೆಹಲಿಯಲ್ಲಿ ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ 500 ರೂಪಾಯಿ ಏರಿಕೆಯಾಗಿದ್ದು, 80900ರೂ. ಗೆ ತಲುಪಿದೆ. ಬುಧವಾರ 80,400 ರೂ. ದರ ಇತ್ತು. ಕಳೆದ ಮೂರು ದಿನಗಳಲ್ಲಿ ಚಿನ್ನದ ದರ 2 ಸಾವಿರ ರೂ.ನಷ್ಟು ಏರಿಕೆ ಆಗಿದೆ.
ಶೇ. 99.5 ರಷ್ಟು ಶುದ್ಧತೆಯ ಚಿನ್ನದ ದರ 10 ಗ್ರಾಂ ಗೆ 500 ರೂಪಾಯಿ ಏರಿಕೆ ಕಂಡಿದೆ. ಬುಧವಾರ 80 ಸಾವಿರ ರೂ. ಇದ್ದ ದರ ಗುರುವಾರ 80,500 ರೂಪಾಯಿಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ 700 ರೂ.ಹೆಚ್ಚಳವಾಗಿದ್ದು, 97,000 ರೂ.ಗೆ ಮಾರಾಟವಾಗಿದೆ.