
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಹತ್ತು ಗ್ರಾಂ ಗೆ 350 ರೂಪಾಯಿಗೆ ಏರಿಕೆಯಾಗಿದ್ದು, 81,000 ರೂ.ಗೆ ಮಾರಾಟವಾಗಿದೆ.
ಬೆಳ್ಳಿ ದರ ಕೆಜಿಗೆ 1500 ರೂಪಾಯಿ ಹೆಚ್ಚಳವಾಗಿದ್ದು, 1.01 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಸರ್ಕಿಟ್ ಬೋರ್ಡ್, ಎಲೆಕ್ಟ್ರಾನಿಕ್ಸ್, ಸೌರಫಲಕ ತಯಾರಿಕೆಯಲ್ಲಿ ಬಳಕೆ ಮಾಡುವುದರಿಂದ ಬೆಳ್ಳಿಗೆ ಬೇಡಿಕೆ ಇದೆ. ಕೈಗಾರಿಕಾ ವಲಯಗಳಿಂದ ಬೇಡಿಕೆ ಹೆಚ್ಚಾದ ಕಾರಣ ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದೆ.