ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಸೆ. 25 ರಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದೆ. ಬೆಳ್ಳಿ ದರ ಕೆಜಿಗೆ 3000 ರೂ. ಏರಿಕೆಯಾಗಿದ್ದು, 93,000 ರೂ.ಗೆ ತಲುಪಿದೆ.
ಚಿನ್ನದ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ 900 ರೂ. ಹೆಚ್ಚಳವಾಗಿದ್ದು, 77,850 ರೂಪಾಯಿಗೆ ಮಾರಾಟವಾಗಿದೆ. ದೆಹಲಿಯಲ್ಲಿ ಶುದ್ಧ ಚಿನ್ನದ ಬೆಲೆ ಪತಿ ಪ್ರತಿ 10 ಗ್ರಾಂಗೆ ಸಾರ್ವಕಾಲಿಕ 77,850 ರೂ.ಗೆ ತಲುಪಿದೆ. ಆಭರಣ ಚಿನ್ನದ ದರ 26950 ರೂ.ಗೆ ತಲುಪಿದೆ.
ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ದರ ದಾಖಲೆಯ 1.01 ಲಕ್ಷ ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಶುದ್ಧ ಚಿನ್ನದ ದರ 77,200 ರೂಪಾಯಿಗೆ ಏರಿಕೆಯಾಗಿದೆ.
ಮುಂಬೈನಲ್ಲಿ ಶುದ್ಧ ಚಿನ್ನದ ದರ 75,248 ರೂ., ಬೆಳ್ಳಿ ದರ ಕೆಜಿಗೆ 90,730 ಇದೆ. ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂ ಗೆ 77,550 ರೂ., ಆಭರಣ ಚಿನ್ನದ ದರ 1 ಗ್ರಾಂಗೆ 7173 ರೂ., ಬೆಳ್ಳಿ ದರ ಕೆಜಿಗೆ 93,200 ರೂಪಾಯಿಗೆ ಮಾರಾಟವಾಗಿದೆ.