
ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್(ಶೇ. 99.9 ಶುದ್ಧತೆಯ) ಚಿನ್ನ 10 ಗ್ರಾಂ ಚಿನ್ನದ ದರ 74,080 ರೂ.ಗೆ ತಲುಪಿದ್ದು, ಒಂದು ಕೆಜಿ ಬೆಳ್ಳಿ ದರ 84,600 ರೂ.ಗೆ ಮಾರಾಟವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಸತತ ಮೂರನೇ ದಿನ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ದರ 160 ರೂಪಾಯಿ ಏರಿಕೆಯಾಗಿದ್ದು 72,000 ರೂ.ಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 200 ರೂಪಾಯಿ ಹೆಚ್ಚಳವಾಗಿದ್ದು 84,700 ರೂಪಾಯಿಗೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ದರ 2356 ಡಾಲರ್ ಇದೆ.
