![](https://kannadadunia.com/wp-content/uploads/2021/01/Gold-silver-June-12-780x405-1.jpg)
ನವದೆಹಲಿ: ಬೆಳ್ಳಿ ದರ ಭಾರಿ ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ದರ ಇಳಿಕೆಯಾಗಿದ್ದು, ಬೆಳ್ಳಿ ದರ ಏರಿಕೆ ಕಂಡಿದೆ.
ಒಂದು ಕೆಜಿ ಬೆಳ್ಳಿ ದರ 600 ರೂ. ಏರಿಕೆಯಾಗಿದ್ದು, 97,200 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿಗೆ ಬೇಡಿಕೆ ಹೆಚ್ಚಿದ ಕಾರಣ ಬೆಲೆ ಏರಿಕೆಯಾಗಿದೆ.
ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಕಡಿಮೆಯಾಗಿದೆ. ಶೇ. 99.9 ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 340 ರೂ. ಇಳಿಕೆಯಾಗಿದ್ದು, 87,960 ರೂ.ಗೆ ಮಾರಾಟವಾಗಿದೆ. ಶೇಕಡ 99.5 ಪರಿಶುದ್ಧತೆಯ ಆಭರಣ ಚಿನ್ನದ ದರ ಕೂಡ 340 ರೂ. ಕಡಿಮೆಯಾಗಿ 87,560 ರೂ.ಗೆ ಮಾರಾಟವಾಗಿದೆ.