
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಗುರುವಾರ ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ಧಾರಣೆ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿಯ ದರ ಕೂಡ ಕಡಿಮೆಯಾಗಿದೆ.
ಶೇಕಡ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 1150 ರೂ. ಇಳಿಕೆಯಾಗಿದ್ದು, 88,200 ರೂಪಾಯಿಗೆ ಮಾರಾಟವಾಗಿದೆ. ಶೇಕಡ 99.5 ಪರಿಶುದ್ಧತೆಯ ಆಭರಣ ಚಿನ್ನದ ದರ ಕೂಡ 1150 ರೂ. ಇಳಿಕೆಯಾಗಿದ್ದು, 87,800 ರೂ.ಗೆ ಮಾರಾಟವಾಗಿದೆ.
ಬೆಳ್ಳಿ ದರ ಕೆಜಿಗೆ ಒಂದು ಸಾವಿರ ರೂಪಾಯಿ ಇಳಿಕೆಯಾಗಿದ್ದು, 98,500 ರೂ.ಗೆ ಮಾರಾಟವಾಗಿದೆ. ಮಂಗಳವಾರ ಬೆಳ್ಳಿ ದರ ಕೆಜಿಗೆ 99,500 ರೂಪಾಯಿ ಇತ್ತು.