ನವದೆಹಲಿ: ಗ್ರಾಹಕರು ಮತ್ತು ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದೆಹಲಿಯ ಚಿನಿವಾರಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬೆಳ್ಳಿ ಮತ್ತು ಚಿನ್ನದ ದರ ಇಳಿಕೆಯಾಗಿದೆ.
ಬೆಳ್ಳಿ ದರ ಕೆಜಿಗೆ 200 ರೂಪಾಯಿ ಕಡಿಮೆಯಾಗಿದ್ದು, 90,000 ರೂ.ಗೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದೆ.
ಶೇಕಡ 99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 200 ರೂಪಾಯಿ ಕಡಿಮೆಯಾಗಿ 79,200 ರೂ.ಗೆ ಮಾರಾಟವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ ದರ 200 ರೂಪಾಯಿ ಕಡಿಮೆಯಾಗಿದ್ದು, 78,800 ರೂ.ಗೆ ಮಾರಾಟವಾಗಿದೆ.