ನವದೆಹಲಿ: ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದಿಂದ ಮಾರಾಟಕ್ಕೆ ಹೆಚ್ಚು ಆಸಕ್ತಿ ತೋರಿಸಿದ ಕಾರಣ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿದೆ.
ಚಿನ್ನದ ದರ 10 ಗ್ರಾಂ ಗೆ 550 ರೂ. ಕಡಿಮೆಯಾಗಿದ್ದು 74,650 ರೂ.ಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 1500 ರೂ. ಕಡಿಮೆಯಾಗಿದ್ದು, 94,500 ರೂ.ಗೆ ಮಾರಾಟವಾಗಿದೆ.
ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ತೋರಿಸಿದ್ದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ ಕಂಡಿತ್ತು. ಚಿಲ್ಲರೆ ಹಣ ದುಬ್ಬರ ನಿಗದಿತ ಗುರಿಯಲ್ಲಿ ಕಾಯ್ದುಕೊಳ್ಳಲು ಬಡ್ಡಿ ದರದಲ್ಲಿ ಯಥಾಸ್ಥಿತಿ ಅನಿವಾರ್ಯವೆಂದು ಅಮೆರಿಕ ಫೆಡರಲ್ ರಿಸರ್ವ್ ಹಣಕಾಸು ನೀತಿ ಸಮಿತಿ ಸದಸ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿರುವುದು ಚಿನ್ನದ ದರ ಇಳಿಕೆಗೆ ಕಾರಣವೆಂದು ಹೇಳಲಾಗಿದೆ.