alex Certify ನಿಮ್ಮನ್ನು ಸಾಲಕ್ಕೆ ನೂಕ್ಬಹುದು ಬಂಗಾರದ ಉಂಗುರ…! ಯಾವ ಬೆರಳು ಧರಿಸೋಕೆ ಸೂಕ್ತ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಸಾಲಕ್ಕೆ ನೂಕ್ಬಹುದು ಬಂಗಾರದ ಉಂಗುರ…! ಯಾವ ಬೆರಳು ಧರಿಸೋಕೆ ಸೂಕ್ತ….?

ನಾವು ಧರಿಸುವ ಪ್ರತಿಯೊಂದು ವಸ್ತು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಅನೇಕರು ಒಂದಾದ್ರೂ ಬಂಗಾರದ ಉಂಗುರವನ್ನು ಧರಿಸಿರುತ್ತಾರೆ. ಕೆಲವರು ಎಲ್ಲ ಬೆರಳಿಗೆ ಒಂದೊಂದು ಉಂಗುರ ಇರುತ್ತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬಂಗಾರದ ಉಂಗುರ ಧರಿಸಲು ಒಂದಿಷ್ಟು ನಿಯಮವಿದೆ. ಎಲ್ಲರೂ ಎಲ್ಲ ಬೆರಳಿಗೆ ಚಿನ್ನದ ಉಂಗುರ ಧರಿಸೋದು ಯೋಗ್ಯವಲ್ಲ. ಇದ್ರಿಂದ ಲಾಭಕ್ಕಿಂತ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗುರು ಗ್ರಹದ ಲೋಹವನ್ನು ಚಿನ್ನ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಕೆಲಸದಲ್ಲಿ ಯಶಸ್ವಿಯಾಗಲು ಚಿನ್ನದ ಉಂಗುರವನ್ನು ಧರಿಸಬೇಕು. ಕೈಯ ಎಲ್ಲಾ ಬೆರಳುಗಳಲ್ಲಿ ಚಿನ್ನದ ಉಂಗುರಗಳನ್ನು ಧರಿಸುವುದು ಸೂಕ್ತವಲ್ಲ.

ಜಾತಕದಲ್ಲಿ ಗುರು ಬಲಹೀನನಾಗಿದ್ದರೆ, ವ್ಯಕ್ತಿಯು ಮಾಡುವ ಕೆಲಸಕ್ಕೆ ಅಡ್ಡಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಗುರುವನ್ನು ಬಲಪಡಿಸಲು  ಉಂಗುರದ ಬೆರಳಿಗೆ ಚಿನ್ನವನ್ನು ಧರಿಸಬೇಕು. ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಗುರು ಸೇರಿದಂತೆ ಇತರ ಗ್ರಹಗಳನ್ನು ಬಲಪಡಿಸಬಹುದು.

ಶಾಸ್ತ್ರಗಳ ಪ್ರಕಾರ, ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು. ಇದನ್ನು ಮಾಡುವುದರಿಂದ ನಕಾರಾತ್ಮಕತೆ ಉಂಟಾಗುತ್ತದೆ. ತಪ್ಪು ದಾರಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ನೀವು ಮಾಡುವ ಕೆಲಸ ಹಾಳಾಗುತ್ತದೆ.

ಮಧ್ಯದ ಬೆರಳಿಗೆ ನೀವು ಚಿನ್ನದ ಉಂಗುರದ ಬದಲು ಕಬ್ಬಿಣದ ಉಂಗುರವನ್ನು ಧರಿಸಬಹುದು. ಇದು ಮಂಗಳಕರವೆಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತೋರು ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ಒಳ್ಳೆಯದು. ಈ ವ್ಯಕ್ತಿ ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾನೆ. ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ.

ನೀವು ಉಂಗುರದ ಬೆರಳಿಗೆ ತಾಮ್ರದ ಉಂಗುರವನ್ನು ಧರಿಸಬೇಕು.  ಕಿರುಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಹೆಬ್ಬೆರಳಿಗೂ ನೀವು ಬೆಳ್ಳಿಯ ಉಂಗುರವನ್ನು ಹಾಕಬಹುದು. ಇದ್ರಿಂದ ಕೋಪ ಕಡಿಮೆ ಆಗಿ, ವ್ಯಕ್ತಿ ಒತ್ತಡದಿಂದ ಮುಕ್ತಿ ಹೊಂದುತ್ತಾನೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...