ನವದೆಹಲಿ: ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ದರ ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಶುಕ್ರವಾರ ಅಪರಂಜಿ ಚಿನ್ನದ ದರ 10 ಗ್ರಾಂಗೆ 1100 ರೂ. ಹೆಚ್ಚಳವಾಗಿದ್ದು, 80,400 ರೂಪಾಯಿಗೆ ತಲುಪಿದೆ. ಆಭರಣ ಚಿನ್ನದ ದರ 1100 ರೂ. ಏರಿಕೆಯಾಗಿದ್ದು 80,000 ರೂ.ಗೆ ತಲುಪಿದೆ.
ಸತತ ಐದನೇ ದಿನವಾದ ಶುಕ್ರವಾರ ಕೂಡ ಚಿನ್ನದ ದರ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಬಲಿಷ್ಠವಾಗುತ್ತಿದ್ದು, ಮದುವೆ ಸೀಸನ್ ಹಿನ್ನೆಲೆಯಲ್ಲಿ ಚಿನ್ನಾಭರಣಕ್ಕೆ ಬೇಡಿಕೆ ಹೆಚ್ಚಾಗಿದೆ. ಹೂಡಿಕೆದಾರರು ಕೂಡ ಚಿನ್ನದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಕಾರಣಗಳಿಂದ ಚಿನ್ನದ ದರ ಏರು ಗತಿಯಲ್ಲಿ ಸಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ದರ ಒಂದು ಗ್ರಾಂಗೆ 7225 ರೂ. ಇದೆ.