ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಲ್ಲಿನಾಥಪುರ ಗ್ರಾಮದ ಮಹಿಳೆಯೊಬ್ಬರು ಚಿನ್ನವನ್ನು ರಾಗಿ ಚೀಲದಲ್ಲಿ ಇಟ್ಟು ಊರಿಗೆ ಹೋಗಿದ್ದಾರೆ. ಈ ವಿಷಯ ತಿಳಿಯದ ಪತಿ ರಾಗಿಯನ್ನು ಮಾರಾಟ ಮಾಡಿದ್ದು, ಖರೀದಿಸಿದ್ದ ರೈಸ್ ಮಿಲ್ ಮಾಲೀಕರು ಮೂಟೆಯಲ್ಲಿ ಸಿಕ್ಕ ಚಿನ್ನಾಭರಣಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರ ಪತ್ನಿ ಲಕ್ಷ್ಮಮ್ಮ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪರ್ಸ್ ನಲ್ಲಿ ಹಾಕಿ ರಾಗಿ ಚೀಲದಲ್ಲಿ ಕಟ್ಟಿಟ್ಟು ಊರಿಗೆ ಹೋಗಿದ್ದಾರೆ. ಇದನ್ನು ತಿಳಿಯದ ಪತಿ ಕಲ್ಲೇಗೌಡ 10 ಮೂಟೆ ರಾಗಿಯನ್ನು ಬಸರಾಳು ಗ್ರಾಮದ ತಿಮ್ಮೇಗೌಡರಿಗೆ ಮಾರಾಟ ಮಾಡಿದ್ದಾರೆ. ರಾಗಿ ಸ್ವಚ್ಛ ಮಾಡಲು ರೈಸ್ ಮಿಲ್ ನಲ್ಲಿ ಮೂಟೆಯಿಂದ ಸುರಿದಾಗ ಚಿನ್ನಾಭರಣ ಇದ್ದ ಪರ್ಸ್ ಕಂಡುಬಂದಿದೆ. ನಂತರ ಅದನ್ನು ವಾರಸುದಾರರಿಗೆ ಹಿಂತಿರುಗಿಸಲಾಗದೆ. ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.