ಚಿನ್ನ ಮತ್ತು ಬೆಳ್ಳಿ ಖರೀದಿ ಪ್ಲಾನ್ ನಲ್ಲಿದ್ದರೆ ನಿಮಗೊಂದು ಬೇಸರದ ಸುದ್ದಿಯಿದೆ. ಮಂಗಳವಾರ ಚಿನ್ನದ ಬೆಲೆ ಏರಿಕೆ ಕಂಡಿದೆ. ಚಿನ್ನದ ಬೆಲೆ 48,000 ರೂಪಾಯಿ ಗಡಿದಾಟಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್‌ನಲ್ಲಿ ಚಿನ್ನದ ಬೆಲೆ ಇಂದು ಶೇಕಡಾ 0.11ರಷ್ಟು ಹೆಚ್ಚಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್‌ನಲ್ಲಿ ಚಿನ್ನದ ಬೆಲೆ 111 ರೂಪಾಯಿ ಹೆಚ್ಚಾಗಿದ್ದು, 10 ಗ್ರಾಂ ಚಿನ್ನದ ಬೆಲೆ 48,177 ರೂಪಾಯಿಯಾಗಿದೆ. ನಿನ್ನೆ 62,301 ರೂಪಾಯಿಗೆ ವಹಿವಾಟು ಮುಗಿಸಿದ್ದ ಬೆಳ್ಳಿ ಬೆಲೆ ಇಂದು 113 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಇಂದು 62,414 ರೂಪಾಯಿಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನವು ಶೇಕಡಾ 0.15 ರಷ್ಟು ಏರಿಕೆಯಾಗಿ 1,810.17 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ 22.99 ಡಾಲರ್ ಪ್ರತಿ ಔನ್ಸ್ ಆಗಿದೆ.
ಸೋಮವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 18 ರೂಪಾಯಿಗಳಷ್ಟು ಏರಿಕೆಯಾಗಿ 47,175 ರೂಪಾಯಿಯಾಗಿತ್ತು. ಬೆಳ್ಳಿ ಪ್ರತಿ ಕೆಜಿಗೆ 342 ರೂಪಾಯಿ ಇಳಿಕೆಯಾಗಿ 60,710 ರೂಪಾಯಿಗಳಿಗೆ ತಲುಪಿತ್ತು.