ದೇಶದೆಲ್ಲೆಡೆ ನವರಾತ್ರಿ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಬಂಗಾರ ಖರೀದಿಸಲು ಮುಂದಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಂದು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್ಜೇಂಜ್ ನಲ್ಲಿ ಬಂಗಾರದ ಬೆಲೆ 82 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 46,825 ರೂಪಾಯಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿನ್ನವು 9,300 ರೂಪಾಯಿ ಅಗ್ಗವಾಗಿದೆ.
ಇಂದು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 37 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆಯೊಂದಿಗೆ ಒಂದು ಕೆ.ಜಿ ಬೆಳ್ಳಿ ಬೆಲೆ 61,040 ರೂಪಾಯಿಯಾಗಿದೆ. ಭಾರತದಲ್ಲಿ 24 ಕ್ಯಾರೆಟ್ ನ 10 ಗ್ರಾಂಗೆ ಚಿನ್ನದ ಬೆಲೆ ಗುರುವಾರ 46,680 ರೂಪಾಯಿಗೆ ಮಾರಾಟವಾಗ್ತಿದೆ. ಬೆಳ್ಳಿ ಪ್ರತಿ ಕೆಜಿಗೆ 60,700 ರೂಪಾಯಿಯಂತೆ ಮಾರಾಟವಾಗ್ತಿದೆ. ದೆಹಲಿ ಮತ್ತು ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,750 ರೂಪಾಯಿಯಾಗಿದೆ.
ಏಕಾಏಕಿ ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚಾಗ್ತಿದೆಯಾ….? ಇದ್ರಿಂದ ದೂರವಿರಿ
ಮನೆಯಲ್ಲೇ ಕುಳಿತು ಬಂಗಾರದ ಬೆಲೆಯನ್ನು ನಾವು ಪರೀಕ್ಷಿಸಬಹುದು. 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬಂಗಾರದ ಬೆಲೆಯನ್ನು ತಿಳಿಯಬಹುದು. ಇಷ್ಟೇ ಅಲ್ಲ ಶುದ್ಧ ಚಿನ್ನದ ಪರೀಕ್ಷೆಗೂ ಸರ್ಕಾರ ಒಂದು ಅಪ್ಲಿಕೇಷನ್ ಮಾಡಿದೆ. ಬಿಐಎಸ್ ಕೇರ್ ಆಪ್ ಮೂಲಕ ಗ್ರಾಹಕರು ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು.