ಧನ್ ತೇರಸ್ ದಿನದಂದು ಚಿನ್ನ ಖರೀದಿಸುವುದು ಮಂಗಳಕರವೆಂದು ನಂಬಲಾಗಿದೆ. ಇಂದು ಅನೇಕರು ಚಿನ್ನ ಖರೀದಿಗೆ ಪ್ಲಾನ್ ಮಾಡ್ತಿದ್ದಾರೆ. ಚಿನ್ನ ಖರೀದಿಸಲು ಆಲೋಚನೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇಂದು ಚಿನ್ನದ ಜೊತೆಗೆ, ಬೆಳ್ಳಿಯ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ.
ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್‌ನಲ್ಲಿ ಚಿನ್ನದ ಬೆಲೆ ಶೇಕಡಾ 0.14 ರಷ್ಟು ಕುಸಿದಿದೆ. ಬೆಳ್ಳಿ ಬೆಲೆಗಳು ಶೇಕಡಾ 0.23ರಷ್ಟು ಕುಸಿದಿದೆ. 2020 ರಲ್ಲಿ ಇದೇ ಅವಧಿಯಲ್ಲಿ, ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ ಗರಿಷ್ಠ 56,200 ರೂಪಾಯಿಯಾಗಿತ್ತು. ಇಂದು 10 ಗ್ರಾಂ ಚಿನ್ನದ ಬೆಲೆ 47,835 ರೂಪಾಯಿಯಲ್ಲಿದೆ. ಅಂದ್ರೆ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಚಿನ್ನದ ಬೆಲೆ ಸುಮಾರು 8,365 ರೂಪಾಯಿಗಳಷ್ಟು ಅಗ್ಗವಾಗುತ್ತಿದೆ.
ಮಹಿಳೆಯರಿಗೆ ಸರ್ಕಾರಿ ಉದ್ಯೋಗ: ಬಸ್ ಪ್ರಯಾಣ, 3 ಸಿಲಿಂಡರ್ ಉಚಿತ: ಪ್ರಿಯಾಂಕ ಗಾಂಧಿ ಭರವಸೆ
ಇಂದು ಚಿನ್ನದ ಬೆಲೆ ಶೇಕಡಾ 0.14 ರಷ್ಟು ಇಳಿಕೆ ಕಂಡು 10 ಗ್ರಾಂಗೆ 47,835 ರೂಪಾಯಿಯಾಗಿದೆ. ಬೆಳ್ಳಿ ಶೇಕಡಾ 0.23 ರಷ್ಟು ಕುಸಿತ ಕಂಡು 1 ಕೆಜಿ ಬೆಳ್ಳಿಯ ಬೆಲೆ 64,641 ರೂಪಾಯಿಯಾಗಿದೆ. ಧನ್ ತೇರಸ್ ದಿನ ದೇಶಾದ್ಯಂತ ಚಿನ್ನದ ಮಾರಾಟ ಹೆಚ್ಚಾಗಲಿದೆ. ವ್ಯಾಪಾರಿಗಳು ಸುಮಾರು 15 ಟನ್ ಚಿನ್ನಾಭರಣಗಳನ್ನು ವ್ಯಾಪಾರ ಮಾಡುವ ನಿರೀಕ್ಷೆಯಿದೆ.