ಮದುವೆ ಋತು ಶುರುವಾಗಿದೆ. ಮದುವೆ ಸಮಾರಂಭಗಳಿಗಾಗಿ ಚಿನ್ನ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ ಸಿಕ್ಕಿದೆ. ವಾರದ ಮೊದಲ ದಿನ ಬಂಗಾರ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ಎಂಸಿಎಕ್ಸ್ ನಲ್ಲಿ ಸೋಮವಾರ ಚಿನ್ನದ ಬೆಲೆ 286 ರೂಪಾಯಿ ಇಳಿದಿದೆ. ಚಿನ್ನದ ಬೆಲೆ 48,959.00 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 759 ರೂಪಾಯಿ ಇಳಿಕೆ ಕಂಡಿದ್ದು, ಕೆ.ಜಿ ಬೆಳ್ಳಿ ಬೆಲೆ 65,727 ರೂಪಾಯಿಯಾಗಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 262 ರೂಪಾಯಿ ಇಳಿಕೆ ಕಂಡಿದ್ದು, 10 ಗ್ರಾಂಗೆ 44,837 ರೂಪಾಯಿಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 48,949 ರೂಪಾಯಿಯಾದ್ರೆ 23 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ 48,753 ರೂಪಾಯಿಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ 36,712 ರೂಪಾಯಿಗೆ ವಹಿವಾಟು ನಡೆಸುತ್ತಿದೆ. 14 ಕ್ಯಾರೆಟ್ ಚಿನ್ನದ ದರ 28635 ರೂಪಾಯಿಯಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 65,727 ರೂಪಾಯಿಯಾಗಿದೆ.
ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತಿರುತ್ತದೆ. ಬೇರೆ ಬೇರೆ ನಗರಗಳಲ್ಲಿ ಚಿನ್ನದ ದರ ಬೇರೆ ಬೇರೆಯಾಗಿರುತ್ತದೆ. ಚಿನ್ನದ ದರವನ್ನು ಮನೆಯಲ್ಲೇ ಕುಳಿತು ತಿಳಿದುಕೊಳ್ಳಬಹುದು. ಅದಕ್ಕೆ ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕಾಗುತ್ತದೆ. ಚಿನ್ನದ ದರದ ವಿವರ ನಿಮಗೆ ಸಿಗುತ್ತದೆ.