ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ದಾಖಲೆಯ ಕುಸಿತ ಕಂಡು ಬಂದಿದೆ.
ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಸಿಇಟಿಗೆ ಇಂದಿನಿಂದ ಅರ್ಜಿ
ಆಗಸ್ಟ್‌ನಲ್ಲಿ ಡೆಲಿವರಿ ಆಗಲಿರುವ ಚಿನ್ನದ ಬೆಲೆಯು ಶುಕ್ರವಾರದಂತೆ 10 ಗ್ರಾಂಗೆ 320 ರೂಪಾಯಿಯಷ್ಟು ಇಳಿಕೆ ಕಂಡಿದ್ದು, 49,000 ರೂ.ಗಳಿಗೆ ಕುಸಿದಿತ್ತು. ಇದೀಗ, ಮತ್ತೆ ಚಿನ್ನದ ಬೆಲೆಯಲ್ಲಿ ಇನ್ನೂ 430 ರೂಪಾಯಿಯಷ್ಟು ಕುಸಿತ ಕಂಡುಬಂದಿದ್ದು, 48,450 ರೂಪಾಯಿಗೆ ಇಳಿದಿದೆ. ಕಳೆದ ಎರಡು ವಹಿವಾಟುಗಳ ಸಂದರ್ಭದಲ್ಲಿ ಒಟ್ಟಾರೆ 750 ರೂಪಾಯಿಯಷ್ಟು ಇಳಿಕೆ ಕಂಡಿದೆ.
ಶ್ರೀಲಂಕಾ ಪ್ರವಾಸಕ್ಕೂ ರಜೆ ಕಳೆಯಲು ಹೊರಟ ಪಾಂಡ್ಯಾ ಸಹೋದರರು
ಕೊರೋನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷ ಜನರು ಚಿನ್ನದ ಮೇಲೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮ ಚಿನ್ನದ ಬೆಲೆಯು 2020ರ ಆಗಸ್ಟ್‌ನಲ್ಲಿ 56,191 ರೂಪಾಯಿಯ ಮಟ್ಟ ತಲುಪಿತ್ತು. ಅಂದಿನ ಮಟ್ಟಕ್ಕಿಂತ 7,750 ರೂಪಾಯಿಯಷ್ಟು ಕುಸಿತ ಕಂಡಿದೆ.