ಚಿನ್ನ ಖರೀದಿಸಲು ಬಯಸಿದ್ದರೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ಇದು ಬೆಸ್ಟ್ ಸಮಯ. ಎಮ್‌ಸಿಎಕ್ಸ್ ನಲ್ಲಿನ ಚಿನ್ನದ ಭವಿಷ್ಯದ ಬೆಲೆ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 46,000 ರೂಪಾಯಿಯಾಗಿದೆ.
ನಿನ್ನೆ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಆದ್ರೆ ದಿನದ ಕೊನೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು, ಚಿನ್ನದ ಬೆಲೆ 10 ಗ್ರಾಂಗೆ 46,000 ರೂಪಾಯಿಗಿಂತ ಕಡಿಮೆಯಾಗಿತ್ತು. ಇಂದು ಚಿನ್ನ 10 ಗ್ರಾಂಗೆ 46,000 ರೂಪಾಯಿಯಲ್ಲಿ ವಹಿವಾಟು ಶುರು ಮಾಡಿತ್ತು. ಆದ್ರೆ ಈಗ ಮತ್ತೆ ಇಳಿಕೆ ಕಂಡು ಬಂದಿದೆ. ಕಳೆದ ಬುಧವಾರದಿಂದ ಚಿನ್ನದ ಬೆಲೆಯನ್ನು ಗಮನಿಸಿದ್ರೆ 10 ಗ್ರಾಂಗೆ 2000 ರೂಪಾಯಿಗಳಷ್ಟು ಅಗ್ಗವಾಗಿದೆ.
ಕಳೆದ ವರ್ಷ, ಕೊರೊನಾ ಬಿಕ್ಕಟ್ಟಿನಿಂದಾಗಿ, ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದರು. ಆಗಸ್ಟ್ 2020 ರಲ್ಲಿ, ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 56,191 ರೂಪಾಯಿ ಗರಿಷ್ಠ ಮಟ್ಟ ತಲುಪಿತ್ತು. ಈ ವರ್ಷ ಚಿನ್ನದ ಬೆಲೆಯಲ್ಲಿ 10,300 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದೆ.
ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಬರ್ತಿದೆ. ಇಂದು ಬೆಳ್ಳಿ ಸೆಪ್ಟೆಂಬರ್ ಭವಿಷ್ಯವು ಆರಂಭದಲ್ಲಿಯೇ ಇಳಿಕೆ ಕಂಡಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 62,500 ರೂಪಾಯಿಯಾಗಿದೆ. ಕಳೆದ ಬುಧವಾರ, ಬೆಳ್ಳಿ ಬೆಲೆ ಕೆ.ಜಿ.ಗೆ 67,500 ರೂಪಾಯಿಯಾಗಿತ್ತು. ಒಂದು ವಾರದಲ್ಲಿ ಪ್ರತಿ ಕೆಜಿಗೆ 5000 ರೂಪಾಯಿ ಅಗ್ಗವಾಗಿದೆ.