ಜುಲೈ 12ರಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿವೆ. ಸ್ಪಾಟ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 73,500 ರೂಪಾಯಿಗಳ ಸಮೀಪದಲ್ಲಿ ವಹಿವಾಟು ನಡೆಸುತ್ತಿವೆ. 24 ಕ್ಯಾರೆಟ್, ಅತ್ಯಧಿಕ ಶುದ್ಧತೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73,580 ರೂಪಾಯಿಯಾಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 67,460 ರೂಪಾಯಿಯಾಗಿದೆ. ಈ ಮಧ್ಯೆ ಬೆಳ್ಳಿಯ ಬೆಲೆ ಪ್ರತಿ ಕಿಲೋಗ್ರಾಂಗೆ 95,600 ರೂಪಾಯಿಗೆ ಬಂದು ನಿಂತಿದೆ.
ಭಾರತದ ಅನೇಕ ನಗರಗಳಲ್ಲಿ ಚಿನ್ನದ ಚಿಲ್ಲರೆ ಬೆಲೆ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ 59,620 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 54,650 ರೂಪಾಯಿಯಾಗಿದೆ. ಬೆಳ್ಳಿಯ ಬೆಲೆ ಕೆಜಿಗೆ 73,600 ರೂಪಾಯಿ ಆಗಿದೆ. ಬೇರೆ ಬೇರೆ ನಗರದಲ್ಲಿ ಚಿನ್ನದ ಬೆಲೆ ಬೇರೆ ಬೇರೆಯಾಗಿರುತ್ತದೆ. ಬೆಂಗಳೂರುರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 54,650 ರೂಪಾಯಿ ಆದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 59,620 ರೂಪಾಯಿ ಆಗಿದೆ.
ಆಮದು ಮಾಡಿಕೊಂಡ ಚಿನ್ನದ ಮೇಲೆ ಭಾರತದ ಅವಲಂಬನೆ ಹೆಚ್ಚಾಗಿರುವ ಕಾರಣ, ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ. ಮೆಹ್ತಾ ಇಕ್ವಿಟೀಸ್‌ನ ಉಪಾಧ್ಯಕ್ಷ ರಾಹುಲ್ ಕಲಾಂತ್ರಿ, ಯುಎಸ್ ಗ್ರಾಹಕ ಬೆಲೆ ಸೂಚ್ಯಂಕ ಬಿಡುಗಡೆಯಾದ ನಂತರ ಗುರುವಾರ ಸಂಜೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಏರಿವೆ. ಇದು ಫೆಡರಲ್ ರಿಸರ್ವ್ ಸಾಲದ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.
CITY | 22 CARAT GOLD RATE TODAY | 24 CARAT GOLD RATE TODAY |
Delhi | 67,460 | 73,580 |
Mumbai | 67,600 | 73,750 |
Ahmedabad | 67,650 | 73,800 |
Chennai | 68,250 | 74,460 |
Kolkata | 67,600 | 73,750 |
Gurugram | 67,750 | 73,900 |
Lucknow | 67,750 | 73,900 |
Bengaluru | 67,600 | 73,750 |
Jaipur | 67,750 | 73,900 |
Patna | 67,650 | 73,800 |
Bhubaneshwar | 67,600 | 73,750 |
Hyderabad | 67,600 | 73,750 |