ನವದೆಹಲಿ: ಗ್ರಾಹಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆಯಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದ್ದು, ಚಿನ್ನದ ದರ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
10 ಗ್ರಾಂ ಚಿನ್ನದ ದರ 1200 ರೂ. ಏರಿಕೆಯಾಗಿದ್ದು, 75,550 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ ಎರಡು ಸಾವಿರ ರೂಪಾಯಿ ಹೆಚ್ಚಳವಾಗಿದ್ದು, 89,000 ರೂ.ಗೆ ಮಾರಾಟವಾಗಿದೆ. ಕಳೆದ ನಾಲ್ಕು ದಿನದ ವಹಿವಾಟಿನಲ್ಲಿ ಬೆಳ್ಳಿ ದರ ಕೆಜಿಗೆ 5200 ರೂ.ವರೆಗೆ ಹೆಚ್ಚಳವಾಗಿದೆ.