ನವದೆಹಲಿ: ಚಿನ್ನದ ದರ 1400 ರೂಪಾಯಿ, ಬೆಳ್ಳಿ ದರ 3150 ರೂಪಾಯಿ ಏರಿಕೆಯಾಗಿದ್ದು, ಶ್ರಾವಣಮಾಸ ಹಬ್ಬದದ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ಚಿನಿವಾರಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ದರ 1400 ರೂ. ಏರಿಕೆಯಾಗಿದ್ದು, 74,150 ರೂಪಾಯಿಗೆ ಮಾರಾಟವಾಗಿದೆ.
ಬೆಳ್ಳಿ ದರ ಕೆಜಿಗೆ 3150 ರೂ. ಹೆಚ್ಚಳವಾಗಿದ್ದು, 87,150 ರೂಪಾಯಿಗೆ ಮಾರಾಟವಾಗಿದೆ. ಜುಲೈ 23 ರಂದು ಚಿನ್ನದ ದರ 10 ಗ್ರಾಂ ಗೆ 3350 ರೂಪಾಯಿ ಕಡಿಮೆಯಾಗಿತ್ತು. ಕೇಂದ್ರ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತಗೊಳಿಸಲಾಗಿದೆ. ಕಳೆದ ತಿಂಗಳಿಂದ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಇವತ್ತು ಒಂದೇ ದಿನ 1400 ರೂ. ಏರಿಕೆಯಾಗಿದೆ.