ನವದೆಹಲಿ: ಯುಗಾದಿ ಹಬ್ಬಕ್ಕೆ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಗುರುವಾರ ಭಾರತದಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ ಗೆ 850 ರೂ. ಹೆಚ್ಚಳವಾಗಿದ್ದು ದಾಖಲೆಯ 70,050 ರೂಪಾಯಿಗೆ ಮಾರಾಟವಾಗಿದೆ.
ಕಳೆದ ಅವಧಿಯಲ್ಲಿ 69,200 ರೂಪಾಯಿಗೆ ಚಿನ್ನದ ದರ ಏರಿಕೆ ಕಂಡಿತ್ತು. ಈ ಬಾರಿ 70,000 ರೂ. ಗಡಿ ದಾಟಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಜಾಗತಿಕ ಬೆಳವಣಿಗೆ ಆಧರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಭಾರತ ಸೇರಿ ಪ್ರಮುಖ ರಾಷ್ಟ್ರಗಳ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದ ಮೊರೆ ಹೋಗುತ್ತಿದ್ದಾರೆ. ಮದುವೆ, ಹಬ್ಬದ ಸೀಸನ್ ನಲ್ಲಿ ಆಭರಣಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.