ಚಿನ್ನ ಯಾರಿಗೆ ಇಷ್ಟವಿಲ್ಲ. ಎಲ್ಲರೂ ಚಿನ್ನ ಧರಿಸಲು ಆಸೆ ಪಡ್ತಾರೆ. ಚಿನ್ನ ಆಭರಣವಾಗಿಯೊಂದೇ ಅಲ್ಲ, ಉಳಿತಾಯ ಕೂಡ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಕೈಗೆ ಧರಿಸುವುದ್ರಿಂದ ಕೈ ಸೌಂದರ್ಯ ಹೆಚ್ಚಾಗುವ ಜೊತೆಗೆ ಸಂಪತ್ತು, ಭಾಗ್ಯದ ಕೊರತೆ ಎದುರಾಗುವುದಿಲ್ಲ.
ಬಂಗಾರದ ಉಂಗುರವನ್ನು ತೋರು ಬೆರಳಿಗೆ ಧರಿಸುವುದ್ರಿಂದ ಸಮೃದ್ಧಿ, ಅದೃಷ್ಟ ಒಲಿದು ಬರುತ್ತದೆ ಎಂದು ನಂಬಲಾಗಿದೆ.
ಹೆಸರು ಹಾಗೂ ಖ್ಯಾತಿ ಬಯಸುವವರು ಮಧ್ಯದ ಬೆರಳಿಗೆ ಉಂಗುರವನ್ನು ಧರಿಸಬೇಕು.
ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಕೊನೆಯ ಬೆರಳಿಗೆ ಉಂಗುರ ಧಾರಣೆ ಮಾಡಬೇಕು.
ಸಂತಾನಹೀನ ದಂಪತಿ ಉಂಗುರ ಬೆರಳಿಗೆ ಚಿನ್ನದ ಉಂಗುರ ಧರಿಸಬೇಕು.
ಚಿನ್ನದ ಉಂಗುರ ಕಳೆದು ಹೋದ್ರೆ ದುರಾದೃಷ್ಟದ ಸಂಕೇತ.
ದಪ್ಪಗಿರುವವರು ಚಿನ್ನದ ಉಂಗುರವನ್ನು ಧರಿಸಬಾರದು.
ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿದ್ದರೆ ಕೊರಳಿಗೆ ಚಿನ್ನದ ಸರವನ್ನು ಧರಿಸಬೇಕು.