ಬೆಂಗಳೂರು: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಶುರುವಾಗಿದ್ದು, ಇದೇ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ.
ಚಿನ್ನ, ಬೆಳ್ಳಿ ದರದಲ್ಲಿ ಏರಿಳಿಕೆಯಾಗುತ್ತಿದೆ. ಕಳೆದ ತಿಂಗಳು ಒಂದು ಗ್ರಾಂ ಗೆ 7000ರೂ.ವರೆಗೆ ಏರಿಕೆಯಾಗಿದ್ದ ಚಿನ್ನದ ದರ ಈಗ 6445 ರೂ.ಗೆ ಇಳಿಕೆಯಾಗಿದೆ. ಕಳೆದ ವಾರ ಒಂದು ಗ್ರಾಂ ಗೆ 6330 ರೂಪಾಯಿಗೆ ಚಿನ್ನದ ದರ ಇಳಿಕೆಯಾಗಿತ್ತು. ಈ ವಾರ 50 -100 ರೂಪಾಯಿ ಏರಿಳಿತ ಮುಂದುವರೆದಿದೆ.
ಕೇಂದ್ರ ಸರ್ಕಾರ ಶೇಕಡ 17ರಷ್ಟಿದ್ದ ಚಿನ್ನಾಭರಣಗಳ ಮೇಲಿನ ಆಮದು ಶುಲ್ಕವನ್ನು ಶೇಕಡ 6ಕ್ಕೆ ಇಳಿಕೆ ಮಾಡಿದ್ದು, ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗತೊಡಗಿದೆ. ದರ ಎಷ್ಟೇ ಇಳಿಕೆಯಾದರೂ ಚಿನ್ನ ಗ್ರಾಂಗೆ 6 ಸಾವಿರ ರೂ.ಗಿಂತ ಹೆಚ್ಚಾಗಿಯೇ ಇರಲಿದೆ. ಒಂದು ಗ್ರಾಂ ಚಿನ್ನದ ದರ 6645 ರೂ., ಶುದ್ಧ ಚಿನ್ನದ ದರ 7031 ರೂಪಾಯಿ ಇದೆ ಎನ್ನಲಾಗಿದೆ.