
ಗುಡ್ ರಿಟರ್ನ್ಸ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 5,505 ರಿಂದ ರೂ. 5,495ಕ್ಕೆ ಇಳಿದಿದೆ. ಅದರಂತೆ, 8 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ರೂ. 44,040 ರ ಹಿಂದಿನ ಅಂಕಿ ಅಂಶದಿಂದ ರೂ. 43,960ಕ್ಕೆ ಇಳಿದಿದೆ. ಆದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನವು ರೂ. 54,950 ನಲ್ಲಿ ಲಭ್ಯವಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಗುರುವಾರವೂ ಇಳಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 5,995 ಆಗಿದೆ. ಎಂಟು ಗ್ರಾಂ ಮತ್ತು 10 ಗ್ರಾಂ ಕ್ರಮವಾಗಿ ರೂ 47,960 ಮತ್ತು ರೂ. 51,950 ಆಗಿದೆ. 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5,99,500 ರೂ.ಗಳು.
ಇನ್ನು ಗುರುವಾರ ಬೆಳ್ಳಿ ಬೆಲೆಯಲ್ಲಿ ಸಹ ಕೊಂಚ ಕುಸಿತವನ್ನು ಕಂಡಿದೆ. ಬುಧವಾರ ರೂ.74 ರಷ್ಟಿದ್ದ ಒಂದು ಗ್ರಾಂ ಬೆಳ್ಳಿ ಈಗ ರೂ. 73.50 ರಷ್ಟಿದೆ. ಅದೇ ರೀತಿ ಎಂಟು ಗ್ರಾಂ ಬೆಳ್ಳಿಯ ಬೆಲೆ ರೂ. 588 ಆಗಿದ್ರೆ, 10 ಗ್ರಾಂ ಬೆಳ್ಳಿ ರೂ. 735 ಕ್ಕೆ ಲಭ್ಯವಿದೆ. ಒಂದು ಕೆಜಿ ಬೆಳ್ಳಿ ರೂ. 73,500ಕ್ಕೆ ಲಭ್ಯವಿದ್ದು, ಬುಧವಾರದ ಬೆಲೆಯಿಂದ ರೂ. 500 ಇಳಿಕೆಯಾಗಿದೆ ಎಂದು ಗುಡ್‌ರಿಟರ್ನ್ಸ್ ತಿಳಿಸಿದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಾಭರಣ ಬೆಲೆ ಎಷ್ಟಿದೆ ಇಲ್ಲಿದೆ ಮಾಹಿತಿ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ ರೂ. 55,100 ಇದ್ದರೆ, ವಾಣಿಜ್ಯ ನಗರಿ ಮುಂಬೈನಲ್ಲಿ ರೂ. 54,950, ಕೋಲ್ಕತ್ತಾದಲ್ಲಿ ರೂ. 54,950, ಚೆನ್ನೈ ರೂ. 55,300, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 54,950 ರೂ. ಇದೆ.
ನಗರ | ಚಿನ್ನ 22K (ರೂ./10 GRAM) | ಬೆಳ್ಳಿ (ರೂ./10 GRAM) |
ದೆಹಲಿ | 55,100 | 735 |
ಮುಂಬೈ | 54,950 | 735 |
ಕೋಲ್ಕತ್ತಾ | 54,950 | 735 |
ಚೆನ್ನೈ | 55,300 | 767 |
ಬೆಂಗಳೂರು | 54,950 | 730 |