![The video clip shows the principal comfortably sleeping on a mat on the floor of the classroom while a few students stand beside her, waving handheld fans to keep her cool.](https://akm-img-a-in.tosshub.com/businesstoday/images/story/202407/66a63900408d2-the-video-clip-shows-the-principal-comfortably-sleeping-on-a-mat-on-the-floor-of-the-classroom-while-282638850-16x9.jpg?size=948:533)
ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಶಿಕ್ಷಕರ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಅಲಿಗಢ್‌ನ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲರು ತರಗತಿಯಲ್ಲಿ ಮಲಗಿ ನಿದ್ರೆ ಮಾಡ್ತಿದ್ದಾರೆ. ವಿದ್ಯಾರ್ಥಿನಿ ಪುಸ್ತಕದ ಸಹಾಯದಿಂದ ಪ್ರಾಂಶುಪಾಲರಿಗೆ ಗಾಳಿ ಬೀಸುತ್ತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಶಿಕ್ಷಕಿ ಡಿಂಪಲ್ ಬನ್ಸಾಲ್ ಅವರನ್ನು ಅಮಾನತು ಮಾಡಲಾಗಿದೆ. ಅಲಿಘರ್‌ನ ಧನಿಪುರ ಪ್ರದೇಶದ ಗೋಕುಲ್‌ಪುರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ತರಗತಿಯಲ್ಲೇ ನೆಲದ ಮೇಲೆ ಹಾಯಾಗಿ ಮಲಗಿದ್ದಾರೆ.
ಇದೇ ವೇಳೆ ಅದೇ ಶಿಕ್ಷಕಿ ವಿದ್ಯಾರ್ಥಿಗಳನ್ನು ಥಳಿಸುವ ಮತ್ತೊಂದು ವಿಡಿಯೋ ಕೂಡ ಹೊರಬಿದ್ದಿದೆ. ಈ ಎರಡೂ ವಿಡಿಯೋವನ್ನು ಪರಿಶೀಲಿಸಿ ಕ್ರಮತೆಗೆದುಕೊಳ್ಳಲಾಗಿದೆ. ಶಿಕ್ಷಕಿ ಹೊಡೆಯುತ್ತಿರುವ ವಿಡಿಯೋ ಹಳೆಯದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![The teacher has been suspended after the video went viral.](https://akm-img-a-in.tosshub.com/indiatoday/2024-07/giff%201.gif?VersionId=33CbW5Ghe.ppV8nMZGX6S8AuxQeec_Sj)