ನವದೆಹಲಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಸಮಿತಿ ವರದಿ ಒಪ್ಪಿದ ಕೋರ್ಟ್ ಮಹಾಬಲೇಶ್ವರ ದೇವಸ್ಥಾನ ಸಮಿತಿ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಜಿಲ್ಲಾ ನ್ಯಾಯಾಧೀಶರು ಸಮಿತಿಯ ಭಾಗವಾಗಿರಬೇಕು. ಸಮಿತಿಗೆ ನೇಮಕಗೊಂಡವರು ನ್ಯಾಯಮೂರ್ತಿ ಶ್ರೀಕೃಷ್ಣ ಅವರೊಂದಿಗೆ ಸಮಾಲೋಚಿಸಿ ಸಮಿತಿಯ ನಿರ್ಧಾರ ಕೈಗೊಳ್ಳಬಹುದು. ಅಧ್ಯಕ್ಷರು ಆಯ್ಕೆಯ ಮತವನ್ನು ಹೊಂದಿರುತ್ತಾರೆ. ಅಧ್ಯಕ್ಷರು, ಉಪಾಧ್ಯಕ್ಷರನ್ನು ಹೊರತುಪಡಿಸಿ ಸದಸ್ಯರು ಸಲಹೆ ಕೊಡಬಹುದು. ವಿಟೋ ಅಧಿಕಾರ ಚಲಾಯಿಸುವಂತಿಲ್ಲ ಎಂದು ಆದೇಶ ನೀಡಿದೆ.
ಸರ್ಕಾರ ನಾಲ್ವರು ಖಾಸಗಿ ಸದಸ್ಯರನ್ನು ನೇಮಕ ಮಾಡಬಹುದು. ಆದರೆ ನಾಲ್ವರು ಕೂಡ ಉಪಾಧಿವಂತರಾಗಿರಬೇಕು ಎಂದು ಸಲಹೆ ನೀಡಿದ್ದು, ಮುಂದಿನ ವಿಚಾರಣೆ ಸೆಪ್ಟಂಬರ್ ಗೆ ಮುಂದೂಡಿದೆ.