alex Certify ಗೋಕಾಕ್ ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಪ್ರಕರಣ: ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಯಿಂದಲೇ ಹಣ ಲೂಟಿ; 14 ಆರೋಪಿಗಳ ಆಸ್ತಿ ಜಪ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಕಾಕ್ ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಪ್ರಕರಣ: ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಯಿಂದಲೇ ಹಣ ಲೂಟಿ; 14 ಆರೋಪಿಗಳ ಆಸ್ತಿ ಜಪ್ತಿ

ಬೆಳಗಾವಿ: ಗೋಕಾಕ್ ಮಹಾಲಕ್ಷ್ಮೀ ಅರ್ಬನ್ ಬ್ಯಾಂಕ್ ಅವ್ಯವಹಾರ ಪ್ರಕರಣಬೇಧಿಸಿರುವ ಪೊಲೀಸರೇ ಶಾಕ್ ಆಗಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸೇರಿ ಐವರು ಸಿಬ್ಬಂದಿಗಳೇ ಬ್ಯಾಂಕ್ ನ ಕೋಟಿ ಕೋಟಿ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

ಗೋಕಾಕ್ ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಎಸ್ ಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಬರೋಬ್ಬರಿ 74.86 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಗರಣದಲ್ಲಿ ಒಟ್ಟು 14 ಜನರು ಭಾಗಿಯಾಗಿದ್ದು, 5 ಆರೋಪಿಗಳು ಅದೇ ಬ್ಯಾಂಕಿನಲ್ಲೇ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ ಎಂದು ತಿಳಿಸಿದರು.

ಅದರಲ್ಲಿಯೂ ಬ್ಯಾಂಕ್ ಮ್ಯಾನೇಜರ್ ಸಾಗರ್ ಹನಮಂತ ಸಬಕಾಳೆ ಪ್ರಮುಖ ಆರೋಪಿಯಾಗಿದ್ದು, ಈತ 6.ಕೋಟಿ 97 ಲಕ್ಷ ಠೇವಣಿ ಇಟ್ಟು ಬೇರೆ ಬೇರೆಯವರ ಹೆಸರಿನಲ್ಲಿ 81 ಕೋಟಿ ರೂ. ಲೋನ್ ಪಡೆದಿದ್ದಾನೆ. ಬ್ಯಾಂಕಿನ ವಹಿವಾಟು ನಾಲ್ಕು ಬಾರಿ ಆಡಿಟ್ ಆಗಿದೆ. ಆದಾಗ್ಯೂ ಈ ಒಂದು ಅಂಶ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಸದ್ಯ ಪ್ರಕರಣ ಸಂಬಂಧ 112 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದರ ಸರಕಾರಿ ಮೌಲ್ಯ 13. ಕೋಟಿ 17 ಲಕ್ಷ ಇದೆ. ಮಾರ್ಕೆಟ್ ಮೌಲ್ಯ 50 ಕೋಟಿ ರೂ. ಇದೆ 11 ಆರೋಪಿಗಳು ಈ ಬ್ಯಾಂಕಿನಲ್ಲಿ ಆರು ಕೋಟಿ ಎಫ್ ಡಿ ಇಟ್ಟು ಬೇರೆ ಬೇರೆ ಅವರ ಹೆಸರಿನಲ್ಲಿ 2021 ರಿಂದ 2024ರ ಅವಧಿಯಲ್ಲಿ 81 ಕೋಟಿ ಸಾಲ ಪಡೆದಿದ್ದಾರೆ ಎಂದು ತಿಳಿಸಿದರು.

ಗೋಕಾಕ ಮಹಾಲಕ್ಷ್ಮೀ ಅರ್ಬನ್ ಬ್ಯಾಂಕ್ ಅವ್ಯವಹಾರ ಬೇಧಿಸಲು ಪೊಲೀಸರ 7 ತಂಡ ರಚನೆ ಮಾಡಲಾಗಿದ್ದು, 11 ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಬ್ಯಾಂಕಿನಲ್ಲಿ ಹಣ ಕಳೆದುಕೊಂಡ ಠೇವಣಿದಾರರಿಗೆ ಹಣ ಮರಳಿ ಕೊಡುವ ಕುರಿತು ಬ್ಯಾಂಕಿನ ಆಡಳಿತ ಮಂಡಳಿ ಈ ನಿಟ್ತಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...