alex Certify ಕೋವಿಡ್ – 19 ವೈರಸ್​ಗೆ ದೇವರ ಸೂಪರ್ ಕಂಪ್ಯೂಟರ್​ ಕಾರಣ: ಯಡವಟ್ಟು ಹೇಳಿಕೆ ನೀಡಿದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ – 19 ವೈರಸ್​ಗೆ ದೇವರ ಸೂಪರ್ ಕಂಪ್ಯೂಟರ್​ ಕಾರಣ: ಯಡವಟ್ಟು ಹೇಳಿಕೆ ನೀಡಿದ ಸಚಿವ

ಕೊರೊನಾದಿಂದಾಗಿ ಕಳೆದೊಂದು ವರ್ಷಗಳಿಂದ ಪರಿಸ್ಥಿತಿ ಬಿಗಡಾಯಿಸಿರೋದ್ರ ನಡುವೆಯೇ ಅಸ್ಸಾಂ ಸಚಿವ ಚಂದ್ರ ಮೋಹನ್​ ಪಾಟೋವರಿ ಕೋವಿಡ್​ 19 ಪರಿಸ್ಥಿತಿ ನಿರ್ಮಾಣವಾಗಲು ದೇವರೇ ಕಾರಣ ಎಂಬ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. ಕೋವಿಡ್​ 19 ವೈರಸ್​ ಮಾನವ ನಿರ್ಮಿತ ಅಲ್ಲ ಬದಲಾಗಿ ಅದು ದೇವರ ಸೂಪರ್​ ಕಂಪ್ಯೂಟರ್​ನಿಂದ ಉತ್ಪತ್ತಿಯಾಗಿದೆ ಎಂದು ಹೇಳಿದ್ದಾರೆ.

ಯಾರಿಗೆ ಸೋಂಕು ಸಂಭವಿಸುತ್ತದೆ, ಯಾರಿಗೆ ಸೋಂಕು ತಗಲುವುದಿಲ್ಲ ಹಾಗೂ ಯಾರು ಸೋಂಕಿನಿಂದ ಸಾಯುತ್ತಾರೆ ಅನ್ನೋದನ್ನು ಪ್ರಕೃತಿ ನಿರ್ಧರಿಸುತ್ತದೆ. ಈ ವೈರಸ್​ ಮನುಷ್ಯ ನಿರ್ಮಿತ ಅಲ್ಲ, ಬದಲಾಗಿ ದೇವರ ಸೂಪರ್​ ಕಂಪ್ಯೂಟರ್​ನಿಂದ ನಿರ್ಮಾಣವಾಗಿದೆ. 2 ಪ್ರತಿಶತ ಮರಣ ಪ್ರಮಾಣ ಹೊಂದಿರುವ ಈ ವೈರಸ್​​ ಕಂಪ್ಯೂಟರ್ನಿಂದ ಬಂದಿದೆ ಎಂದು ಚಂದ್ರ ಮೋಹನ್​ ಹೇಳಿದ್ದಾರೆ.

ಪಾಟೋವರಿ ಆಸ್ಸಾಂನಲ್ಲಿ ಸಾರಿಗೆ, ಕೈಗಾಗಿಕೆ ಹಾಗೂ ವಾಣಿಜ್ಯ ಇಲಾಖೆಯ ಸಚಿವರಾಗಿದ್ದಾರೆ. ಕೋವಿಡ್​ 19ನಿಂದ ಪತಿಯನ್ನು ಕಳೆದುಕೊಂಡ ಮಹಿಳೆಯರ ಬಗ್ಗೆ ಮಾತನಾಡುವ ವೇಳೆ ಪಾಟೋವರಿ ಈ ಯಡವಟ್ಟು ಹೇಳಿಕೆಯನ್ನು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...