alex Certify ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದಿದ್ದ ಅನ್ನಪೂರ್ಣೆ ವಿಗ್ರಹ ಇಂದು ತವರಿಗೆ ವಾಪಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಮಾನಗಳ ಹಿಂದೆ ಕೆನಡಾಗೆ ಕದ್ದೊಯ್ದಿದ್ದ ಅನ್ನಪೂರ್ಣೆ ವಿಗ್ರಹ ಇಂದು ತವರಿಗೆ ವಾಪಸ್​

ಬರೋಬ್ಬರಿ 100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಇಂದು ಉತ್ತರ ಪ್ರದೇಶ ಸರ್ಕಾರ ವಾಪಾಸ್​ ಪಡೆಯಲಿದೆ.

18ನೇ ಶತಮಾನದ ಕಲ್ಲಿನಿಂದ ನಿರ್ಮಾಣವಾದ ಅನ್ನಪೂರ್ಣ ದೇವಿಯ ಶಿಲ್ಪ ಇದಾಗಿದೆ. ಇದನ್ನು ಕೆನಡಾದಿಂದ ರಾಷ್ಟ್ರ ರಾಜಧಾನಿಗೆ ತರಲಾಗಿದೆ. ಕೇಂದ್ರದ ರಾಜ್ಯ ಸಚಿವೆ ಮೀನಕಾಶಿ ಲೇಖಿ ಇಂದು ದೆಹಲಿಯ ನ್ಯಾಷನಲ್​ ಗ್ಯಾಲರಿ ಆಫ್​ ಮಾಡರ್ನ್​ ಆರ್ಟ್​ನಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ರು.

ಸದ್ಯ ದೆಹಲಿಯಲ್ಲಿರುವ ಈ ವಿಗ್ರಹವನ್ನು ಕೆಲವೇ ಸಮಯಗಳಲ್ಲಿ ಅಲಿಘರ್​ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ವಿಗ್ರಹವನ್ನು ನಾಳೆ ಕಣೌಜ್​ಗೆ ಕೊಂಡೊಯ್ಯಲಾಗುತ್ತದೆ. ಇದಾದ ಬಳಿಕ ನವೆಂಬರ್​ 14ರಂದು ಅಯೋಧ್ಯಾಗೆ ಸಾಗಿಸಲಾಗುತ್ತದೆ.

ನವೆಂಬರ್​ 15ರಂದು ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಸಕಲ ಸಂಪ್ರದಾಯದಂತೆ ಪ್ರತಿಮೆ ಅನುಷ್ಟಾನಗೊಳ್ಳಲಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ನವೆಂಬರ್​ 15ರಂದು ಕಾಶಿ ವಿಶ್ವನಾಥ ದೇಗುಲದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಿದ್ದಾರೆ. ಈ ಕಲ್ಲಿನ ವಿಗ್ರಹವು 17 ಸೆಂಟಿ ಮೀಟರ್​ ಎತ್ತರ, 9 ಸೆಂಟಿ ಮೀಟರ್​ ಅಗಲ ಹಾಗೂ 4 ಸೆಂಟಿ ಮೀಟರ್​ ದಪ್ಪವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...