
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಳಸದ ಕಳಸೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ 2,000 ರೂ. ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ.
ದೇವಾಲಯಕ್ಕೆ ಬಂದ ಭಕ್ತ ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿ 2000 ರೂ. ಮುಖಬೆಲೆಯ ಜೆರಾಕ್ಸ್ ನೋಟುಗಳನ್ನು ಕಾಣಿಕೆ ಹುಂಡಿಗೆ ಹಾಕಿ ಹೋಗಿದ್ದಾರೆ. ಮುಜರಾಯಿ ಇಲಾಖೆ ಸಿಬ್ಬಂದಿ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡುವಾಗ ಜೆರಾಕ್ಸ್ ನೋಟು ಪತ್ತೆಯಾಗಿದ್ದು, ಅದನ್ನು ಹರಿದು ಹಾಕಲಾಗಿದೆ. ನಕಲಿ ನೋಟು ಹಾಕಿದ ಭಕ್ತ ದೇವರನ್ನೇ ಯಾಮಾರಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ.