ಫೆಬ್ರವರಿ 6 ರಂದು ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪದಿಂದಾಗಿ ಉಭಯ ದೇಶಗಳ ಜನ ನಲುಗಿ ಹೋಗಿದ್ದಾರೆ. ಈಗಾಗಲೇ 50,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ವ್ಯಕ್ತವಾಗುತ್ತಿದೆ.
ಇದರ ಮಧ್ಯೆ ಭೂಕಂಪ ಸಂಭವಿಸುತ್ತಲೆ ಭಾರತ ಸರ್ಕಾರ, ‘ಆಪರೇಷನ್ ದೋಸ್ತ್’ ಹೆಸರಿನಲ್ಲಿ ಟರ್ಕಿ ಹಾಗೂ ಸಿರಿಯಾ ಜನತೆಯ ನೆರವಿಗೆ ಧಾವಿಸಿದ್ದು, ಸೇನೆಯ ನಾಲ್ಕು ಸರಕು ಸಾಗಾಣೆ ವಿಮಾನಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿತ್ತು. ಜೀವರಕ್ಷಕ ಸಾಧನಗಳು, ಔಷಧಿಗಳು, ಆಹಾರ ಮೊದಲಾದವುಗಳು ಇದರಲ್ಲಿ ಸೇರಿದ್ದವು.
ಇದರ ಜೊತೆಗೆ ಅವಶೇಷಗಳಡಿ ಸಿಲುಕಿದ್ದವರನ್ನೂ ಸಹ ಭಾರತೀಯ ಸೈನಿಕರು ಹೊರ ತೆಗೆದಿದ್ದು, ಆಸ್ಪತ್ರೆಗೆ ದಾಖಲಿಸುವ ಮೂಲಕ ಜೀವ ಉಳಿಸಲು ಕಾರಣಕರ್ತರಾಗಿದ್ದರು. ಭಾರತದ ನೆರವಿಗೆ ಟರ್ಕಿ ಜನ ಮನದುಂಬಿ ಕೃತಜ್ಞತೆ ಸಲ್ಲಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.