ಆಸ್ಟ್ರೇಲಿಯಾದ ವಿಕ್ಟೋರಿಯಾ ಚಿನ್ನದ ಗಣಿಯಲ್ಲಿ ತನ್ನ ಜೀವನ್ಮಾನದ ಶೋಧವೊಂದನ್ನು ಮಾಡಿದ ವ್ಯಕ್ತಿಯೊಬ್ಬ ಭಾರೀ ಪ್ರಮಾಣದಲ್ಲಿ ಚಿನ್ನ ಹೊರ ತೆಗದಿದ್ದಾನೆ.
ಡರ‍್ರೆನ್ ಕಂಪ್ ಹೆಸರಿನ ಈತ 4.6 ಕೆಜಿಯಷ್ಟು ಚಿನ್ನಭರಿತ ಶಿಲೆಯನ್ನು ಬಗೆದಿದ್ದು, ಇದರಲ್ಲಿ ಆಸ್ಟ್ರೇಲಿಯನ್ $240,000 ಮೌಲ್ಯದ ಚಿನ್ನವಿರುವುದು ತಿಳಿದು ಬಂದಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಕಲ್ಲಿನಲ್ಲಿ 2.6 ಕೆಜಿಯಷ್ಟು ಚಿನ್ನ ಇದೆ.
19ನೇ ಶತಮಾನದಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ವಿಕ್ಟೋರಿಯನ್ ಗಣಿಗಳಲ್ಲಿ ಈತ ಹೀಗೊಂದು ಶೋಧ ಮಾಡಿದ್ದಾನೆ. ತನ್ನ ಈ ಅನ್ವೇಷಣೆಯಿಂದ ತನ್ನ ಮಡದಿಗೆ ಎಲ್ಲರಿಗಿಂತ ಹೆಚ್ಚು ಖುಷಿಯಾಗಿರಲಿದೆ ಎನ್ನುತ್ತಾರೆ ಡೆರ‍್ರೆನ್ ಕಂಪ್.
ಸ್ವಾಭಾವಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಆಸ್ಟ್ರೇಲಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಚಿನ್ನದ ನಿಕ್ಷೇಪಗಳಿದ್ದು, ಜಗತ್ತಿನ ಅತಿ ದೊಡ್ಡ ನಗ್ಗೆಟ್‌ಗಳು ಇಲ್ಲಿ ಪತ್ತೆಯಾಗುತ್ತವೆ.