
ಹಳ್ಳಿಕಡೆಗಳಲ್ಲಿ ಜನರು ಖುಷಿಗಾಗಿ ಮೇಕೆಯ ದನಿಯನ್ನು ಅನುಕರಿಸುವುದು ಸಾಮಾನ್ಯ. ಇಲ್ಲೊಂದು ವಿಡಿಯೋದಲ್ಲಿ ಮೇಕೆ ಮರಿ ಹಾಗೂ ಮಗು ಒಂದೇ ರೀತಿ ಅಳುವುದು ನೆಟ್ಟಿಗರಿಗೆ ಖುಷಿ ತಂದಿದೆ.
ಮುದ್ದಾದ ಪುಟ್ಟ ಮೇಕೆ ಮತ್ತು ಮರಿ ಒಟ್ಟಿಗೆ ತಳ್ಳು ಗಾಡಿಯಲ್ಲಿ ಕುಳಿತಿದ್ದು, ಮೇಕೆ ಮರಿ ಆತಂಕದಲ್ಲಿ ದನಿ ಮಾಡುತ್ತದೆ. ಆ ಶಬ್ದ ಮಗುವಿಗೂ ಗಾಬರಿ ಬರಿಸಿದ್ದು ಅದು ಕೂಡ ಅಳುತ್ತದೆ. ಎರಡೂ ಒಂದನ್ನೊಂದು ಅನುಕರಿಸುವಂತೆ ಕಾಣಿಸುತ್ತದೆ. ಈ ರೀಲ್ 27.8 ಮಿಲಿಯನ್ ವೀಕ್ಷಣೆ ಮತ್ತು 1.8 ಮಿಲಿಯನ್ ಲೈಕ್ಪಡೆದುಕೊಂಡಿದೆ.
ನೆಟ್ಟಿಗರು ಈ ವಿಡಿಯೊವನ್ನು ಕಂಡು, ಅಳುತ್ತಿರುವ ಮಗುವನ್ನು ನೋಡಿ ನಗುತ್ತಿರುವುದಕ್ಕೆ ಬೇಸರವಾಗಿದೆ ಎಂದು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಕಳೆದ ಕೆಲವು ವಾರಗಳಿಂದ ನಾನು ಏಕಾಂಗಿ ಬೆಳಿಗ್ಗೆ ಮತ್ತು ಸಂಜೆ ಕೃಷಿ ಕೆಲಸಗಳಲ್ಲಿ ತೊಡಗಿದ್ದೇನೆ. ನಮ್ಮ ಸಂಜೆಯ ದಿನಚರಿಯಲ್ಲಿ ಹೊಸತನದಿಂದಿರಲು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಆ ಮಗುವಿನ ತಾಯಿ ಕೊಲೀನ್ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಕೊಲೀನ್ ಕೃಷಿ ಶಿಕ್ಷಣ ತಜ್ಞರಾಗಿದ್ದಾರೆ. ಆಕೆ ಮತ್ತು ಪತಿ ಬೆನ್ ಚಿಕಾಗೋ ಸೆಟಲೈಟ್ನಲ್ಲಿ ಕೃಷಿ ಮಾಡಿಕೊಂಡಿದ್ದು, ಸರಳ ಜೀವನದ ಪ್ರತಿಪಾದಕರು.