ಉತ್ತರ ಗೋವಾದ ಜನಪ್ರಿಯ ಕಲಂಗುಟ್ ಬೀಚ್ ಬಳಿ ಪ್ರಾರಂಭವಾಗಿದ್ದ ಸೆಕ್ಸ್ ಟಾಯ್ಸ್ ಮಳಿಗೆ ಬಾಗಿಲು ಮುಚ್ಚಲಾಗಿದೆ. ಕಾಮ ಗಿಜ್ಮೋಸ್ ಹೆಸರಿನಲ್ಲಿ ಪ್ರಾರಂಭವಾಗಿದ್ದ ಮಳಿಗೆ, ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಬಂದ್ ಆಗಿದೆ.
ಈ ಅಂಗಡಿಗೆ ಸಂಬಂಧಿಸಿದ ಸುದ್ದಿ ವೈರಲ್ ಆದ ನಂತರ ಪಂಚಾಯತ್ಗೆ ಹಲವಾರು ಮೌಖಿಕ ದೂರುಗಳು ಬಂದಿವೆ ಎಂದು ಕ್ಯಾಲಂಗುಟ್ ಗ್ರಾಮ ಪಂಚಾಯತ್ ಸರ್ಪಂಚ್ ತಿಳಿಸಿದ್ದಾರೆ. ವ್ಯಾಪಾರ ಪರವಾನಗಿ ಇಲ್ಲದ ಕಾರಣ ಅಂಗಡಿ ಮುಚ್ಚಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಅಂಗಡಿಯ ಸಹ ಸಂಸ್ಥಾಪಕ ನೀರವ್ ಮೆಹ್ತಾ. ಇದನ್ನು ಪ್ರಾರಂಭಿಸಿದ ನಂತ್ರ ಇದನ್ನು ದೇಶದ ಮೊದಲ ಅಧಿಕೃತ ಲೈಂಗಿಕ ಅಂಗಡಿ ಎಂದು ಕರೆದಿದ್ದರು. ಅಂಗಡಿ ಮಾಲೀಕರಿಗೆ, ಅಗತ್ಯವಿರುವ ಎಲ್ಲಾ ಕಾನೂನು ದಾಖಲೆಗಳನ್ನು ನೀಡುವಂತೆ ಪಂಚಾಯತಿ ಸೂಚನೆ ನೀಡಿದೆ. ಅಂಗಡಿ ಬಂದ್ ಆಗಿರುವ ಬಗ್ಗೆ ನೀರವ್ ಮೆಹ್ತಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗೋವಾದ ಕಲಂಗುಟ್ ಬೀಚ್ ಪ್ರಸಿದ್ಧ ಬೀಚ್ ಗಳಲ್ಲಿ ಒಂದು. ಬೀಚ್ ಬಳಿ ಲೈಂಗಿಕ ದಂಧೆಗಳು ಹೆಚ್ಚಾಗಿ ನಡೆಯುತ್ತವೆ. ಇಂಥ ಜಾಗದಲ್ಲಿ ಸೆಕ್ಸ್ ಟಾಯ್ಸ್ ಅಂಗಡಿ ಇರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಎದ್ದಿದೆ.