33 ವರ್ಷದ ನೌಕಾ ದಳದ ಸಿಬ್ಬಂದಿ ದಕ್ಷಿಣ ಗೋವಾದ ವಾಸ್ಕೋ ಪಟ್ಟಣದ ನೌಕಾನೆಲೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೌಕಾ ವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಮೀಪದಲ್ಲಿ ಪತ್ತೆಯಾದ ನಾವಿಕ ರಾಜೇಶ್ ಕುಮಾರ್ ಕುಶ್ವಾಹ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಭಾರತೀಯ ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.
ಮೃತ ನೌಕಾ ದಳದ ಸಿಬ್ಬಂದಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಹಾಗೂ ಅವರು ಗೋವಾದಲ್ಲಿ ವಾಸಿಸುತ್ತಿದ್ದರು. ಸದ್ಯ ಗೋವಾದ ಪೊಲೀಸರು ನೌಕಾ ದಳದ ಅಧಿಕಾರಿಗಳ ನೆರವಿನೊಂದಿಗೆ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.