ಗೋವಾ ಅಂದಾಕ್ಷಣ ಮೊಟ್ಟ ಮೊದಲಿಗೆ ನೆನಪಾಗೋದು ಅಲ್ಲಿಯ ಬೀಚ್‌ಗಳು. ಇದನ್ನ ನೋಡೋದಕ್ಕಂತಾನೇ ದೂರದೂರಿನಿಂದ ಪ್ರವಾಸಿಗರು ಹೋಗುತ್ತಾರೆ. ಈ ಬಾರಿ ಗೋವಾಗೆ ಬೀಚ್ ಗಳಲ್ಲಿ ಸುತ್ತಾಡೋದಕ್ಕಂತಾ ಹೋದವರನ್ನ, ನಡುರಸ್ತೆಯಲ್ಲಿ ವೆಲ್‌ಕಮ್ ಮಾಡಿದ್ದು ಮೊಸಳೆಗಳು.
ಮಧ್ಯರಾತ್ರಿ ನಡುರಸ್ತೆಯಲ್ಲಿ ಒಮ್ಮಿಂದೊಮ್ಮೆ ಮೊಸಳೆಗಳನ್ನ ನೋಡಿದ್ರೆ ಗುಂಡಿ ಎಷ್ಟೇ ಗಟ್ಟಿ ಇದ್ದರೂ ಅವರ ಜೀವ ಬಾಯಿಗೆ ಬಂದು ಬಿಡುತ್ತೆ. ಗೋವಾದಲ್ಲೂ ಆಗಿದ್ದು ಇದೇ. ರಸ್ತೆ ಮಧ್ಯದಲ್ಲಿ ಮೊಸಳೆಯೊಂದು ಓಡಾಡ್ತಿರೋದನ್ನ ನೋಡಿ ಜನರು ಗಾಬರಿಯಾಗಿದ್ದರು. ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರು ಸವಾರರು ಆ ದೃಶ್ಯ ನೋಡಿ ದಂಗಾಗಿದ್ದರು. ನಾಯಿಗಳು ಸಹ ರಸ್ತೆಯಲ್ಲಿ ನಡೆಯುತ್ತ ಬಂದ ಮೊಸಳೆನ್ನ ನೋಡಿ ಶಾಕ್ ಆಗಿ ಹೋದ ಹಾಗಿತ್ತು. ಈಗ ಅದೇ ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೋವಾ ಮಡಗಾಂವ್‌ನ ಮಛಲಿ ಬಜಾರ್‌ನಲ್ಲಿ ಈ ಒಂದು ದೃಶ್ಯ ನೋಡಲು ಸಿಕ್ಕಿದ್ದು, ಗೋವಾ ನ್ಯೂಸ್ ಡಬ್ ಅನ್ನೊ ವೆಬ್‌ಸೈಟ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಇದರ ಶೀರ್ಷಿಕೆ ‘ಮಡಗಾಂವ್ ಮೀನು ಮಾರುಕಟ್ಟೆ ಬಳಿ ರಾತ್ರಿ 10.30ಕ್ಕೆ ಮೊಸಳೆ ಓಡಾಡುತ್ತಿರುವ ದೃಶ್ಯ’
ನೆಟ್ಟಿಗರು ಸಹ ಈ ವಿಡಿಯೋ ನೋಡಿ ಹೌಹಾರಿದ್ದಾರೆ. ಅಲ್ಲೇ ಇರುವ ನೀರಿನ ಕೊಳದಿಂದ ಈ ಮೊಸಳೆ ಬಂದಿರಬಹುದು ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.