ಗೋವಾ ವಿಮೋಚನ ದಿವಸದ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಜನತೆ ಉದ್ದೇಶಿಸಿ ಮಾತನಾಡಿರುವ ಸಿಎಂ ಪ್ರಮೋದ್ ಸಾವಂತ್, ದೇವಸ್ಥಾನಗಳ ಪುನರ್ನಿರ್ಮಾಣದ ಸುಳಿವು ನೀಡಿದ್ದಾರೆ.
ಗೋವಾ ವಿಮೋಚನೆಯ 60 ನೇ ವರ್ಷಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪೋರ್ಚುಗೀಸರ ದೀರ್ಘ ಆಳ್ವಿಕೆಯಲ್ಲಿ ನಾಶವಾದ ದೇವಾಲಯಗಳನ್ನ ಪುನರ್ನಿಮಿಸುವ ಮೂಲಕ ಗೋವಾದಲ್ಲಿ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದಿದ್ದಾರೆ.
ಪೋಂಡಾದ ಮಂಗೂಶಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಸಾವಂತ್, ಅಭಿವೃದ್ಧಿ ಮಂಗೂಶಿ ದೇವಸ್ಥಾನವು ಗೋವಾದ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪೋರ್ಚುಗೀಸ್ ಆಳ್ವಿಕೆಯಲ್ಲಿ ನಾಶವಾದ ಕೆಲವು ದೇವಾಲಯಗಳನ್ನು ನಮ್ಮ ಪೂರ್ವಜರು ಪುನರ್ನಿರ್ಮಿಸಿದ್ದರು ಮತ್ತು ಈಗ ಸರ್ಕಾರವು ವೆರ್ನಾದಲ್ಲಿರುವ ಮಾಲ್ಸಾ ದೇವಾಲಯದಂತಹ ಕೆಲವು ದೇವಾಲಯಗಳ ರಿನೋವೇಷನ್ ಗೆ ಸಹಾಯ ಮಾಡಿದೆ.
ದೇಶದ ದೇವಾಲಯಗಳಲ್ಲಿ ನಾಶವಾದ ಮತ್ತು ಪುನರ್ನಿರ್ಮಾಣವಾಗಿರುವ ದೇವಸ್ಥಾನ ಎಂಬುದು ಗೋವಾದವರಿಗೆ ಹೆಮ್ಮೆಯ ವಿಷಯ. ಮತ್ತೆ ನಿರ್ಮಾಣವಾಗಲು ಬಾಕಿ ಉಳಿದಿರುವ ದೇವಾಲಯಗಳು ಇವೆ. ವಿಮೋಚನೆಯ 60 ನೇ ವರ್ಷದಲ್ಲಿ, ಪೋರ್ಚುಗೀಸರು ನಾಶಪಡಿಸಿದ ದೇವಾಲಯಗಳ ಪುನರ್ನಿರ್ಮಾಣವನ್ನು ಪ್ರಾರಂಭಿಸಲು ನಾವು ಬಯಸುತ್ತೇವೆ, ಹಿಂದೂ ಸಂಸ್ಕೃತಿ ಮತ್ತು ಮಂದಿರ ಸಂಸ್ಕೃತಿಯನ್ನು ಮತ್ತೊಮ್ಮೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜನಸಾಮಾನ್ಯರನ್ನ ಕೇಳಿಕೊಂಡಿದ್ದಾರೆ. ಈ ದೇವಾಲಯಗಳನ್ನು ಪುನರ್ನಿರ್ಮಿಸಲು ನಮಗೆ ಶಕ್ತಿಯನ್ನು ನೀಡಿ ಎಂದಿದ್ದಾರೆ.